ಕಡಬದ ಯುವಕ ಮಸ್ಕತ್’ನಲ್ಲಿ ಆತ್ಮಹತ್ಯೆ !

Prasthutha|

ಕಡಬ: ಕೊಯಿಲ ಗ್ರಾಮದ ಯುವಕನೋರ್ವ ವಿದೇಶದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

- Advertisement -


ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಕೊಯಿಲ ಗ್ರಾಮದ ಸುಣ್ಣಾಡಿ ನಿವಾಸಿ ದಿ.ಮೋನಪ್ಪ ಪೂಜಾರಿಯವರ ಪುತ್ರ ಅವಿವಾಹಿತ ಸಂದೇಶ್ (32) ಎಂದು ತಿಳಿದು ಬಂದಿದೆ.


ಸಂದೇಶ್ ಓಮನ್ ದೇಶದ ಮಸ್ಕತ್ ನಲ್ಲಿ ನೀರಿನ ಕಂಪನಿಯೊಂದರಲ್ಲಿ ಲೈನ್ ಸೇಲ್ ಉದ್ಯೋಗ ಮಾಡುತ್ತಿದ್ದು, ಎಂಟು ತಿಂಗಳ ಹಿಂದೆಯಷ್ಟೆ ಕೆಲಸಕ್ಕೆ ಸೇರಿದ್ದರು. ಇವರ ಸಹೋದರ ಸಂತೋಷ್ ಕೂಡಾ ಮಸ್ಕತ್ ನಲ್ಲೇ ಉದ್ಯೋಗದಲ್ಲಿದ್ದು ಒಂದೇ ಕೊಠಡಿಯಲ್ಲಿ ವಾಸವಾಗಿದ್ದರು.

- Advertisement -


ಆತ್ಮಹತ್ಯೆ ಮಾಡಿಕೊಂಡ ಸಂದೇಶ್ ಸಂಬಂಧಿಯಾದ ಕೊಯಿಲ ಗ್ರಾಮದ ಅಂಬಾ ನಿವಾಸಿ ಚರಣ್ ಎಂಬ ಯುವಕ ಕೂಡಾ ಮಸ್ಕತ್ ನಲ್ಲಿ ಉದ್ಯೋಗದಲ್ಲಿದ್ದು ಇವರು ಇನ್ನೊಂದು ಕೊಠಡಿಯಲ್ಲಿ ವಾಸವಾಗಿದ್ದಾರೆ. ಬೇಗ ಕರ್ತವ್ಯ ಮುಗಿಸಿ ಬಂದ ಸಂದೇಶ್ ಮನೆಯ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.


ಆರಂಭದಲ್ಲಿ ವಿಸಿಟಿಂಗ್ ವೀಸಾದಲ್ಲಿ ಮಸ್ಕತ್ ಗೆ ತೆರಳಿದ್ದ ಅವರು ಬಳಿಕ ಅಲ್ಲಿ ಕೆಲಸದ ವೀಸಾ ಪಡೆದು ಉದ್ಯೋಗ ಮಾಡುತ್ತಿದ್ದರು.
ಸಂಸ್ಥೆಯಲ್ಲಿ ಉತ್ತಮ ವೇತನ ಹಾಗೂ ಯಾವುದೇ ಕಿರಿಕಿಯಿಲ್ಲದ ಉದ್ಯೋಗ ಇದ್ದು ಯಾವುದೇ ಸಮಸ್ಯೆಗಳಿರಲಿಲ್ಲ ಎನ್ನಲಾಗಿದೆ. ಆದರೇ ಆತ್ಮಹತ್ಯೆಗೆ ಮುನ್ನ ಸಾರಿ ಅಣ್ಣ ಎಂದು ಒಂದು ಲೈನ್ ನ ಪತ್ರ ಬರೆದಿಟ್ಟು ಆತ್ಮ ಹತ್ಯೆ ಮಾಡಿಕೊಂಡಿದ್ದು ಕುಟುಂಬದವರಿಗೆ ಅಘಾತ ಉಂಟು ಮಾಡಿದೆ.