ಮಂಗಳೂರು: ಜೂನ್ 1ರಿಂದ ಸೆ. 31ರವರೆಗೆ ರಸ್ತೆ ಅಗೆಯುವುದಕ್ಕೆ ಮನಪಾ ನಿಷೇಧ

Prasthutha|

ಮಂಗಳೂರು: ಜೂನ್ 1ರಿಂದ ಸೆಪ್ಟಂಬರ್ 31ರವರೆಗೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕ ರಸ್ತೆಯನ್ನು ಅಗೆಯುವಂತಿಲ್ಲ ಎಂದು ಮನಪಾ ಪ್ರಕಟನೆಯಲ್ಲಿ ತಿಳಿಸಿದೆ.

- Advertisement -

ಈ ಕುರಿತು ಪ್ರಕಟನೆ ಹೊರಡಿಸಿರುವ ಮಂಗಳೂರು ಮನಪಾ ಆಯುಕ್ತ, ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯೊಳಗಿನ ಸಾರ್ವಜನಿಕರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ ಜೂನ್ ತಿಂಗಳಾರಂಭದಲ್ಲಿ ಮಳೆಗಾಲ ಪ್ರಾರಂಭವಾಗಲಿರುವುದರಿಂದ 01-06-2023 ರಿಂದ 31-09-2023ರ ವರೆಗೆ ನಳ್ಳಿ ನೀರಿನ ಜೋಡಣೆ, ಒಳಚರಂಡಿ ಜೋಡಣೆ, ವಿದ್ಯುತ್ ಸಂಪರ್ಕ ಹಾಗೂ ಇನ್ನಿತರ ಯಾವುದೇ ಉದ್ದೇಶಕ್ಕೆ ಉದ್ದೇಶಕ್ಕೆ ಸಾರ್ವಜನಿಕ ರಸ್ತೆಯನ್ನು ಕಡಿತಗೊಳಿಸುವುದನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ನಿಷೇದಿಸಲಾಗಿದೆ. ರಸ್ತೆ ಕಡಿತಗೊಳಿಸುವುದು ಕಂಡುಬಂದಲ್ಲಿ ಕೆ.ಎಂ.ಸಿ ಕಾಯ್ದೆಯಂತೆ ಸೂಕ್ತ ರೀತಿಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.