ಮುಲ್ಕಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹೋಬಳಿ ಮಟ್ಟದ ಪ್ರಾಥಮಿಕ ವಿಭಾಗದ ಕಬ್ಬಡಿ ಪಂದ್ಯಾಟ

Prasthutha|

ಮುಲ್ಕಿ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಮಂಗಳೂರು ಉತ್ತರ ವಲಯ ಹಾಗೂ ಎಂ ಸಿ ಟಿ ಪಬ್ಲಿಕ್ ಸ್ಕೂಲ್ , ಕಿಲ್ಪಾಡಿ, ಮುಲ್ಕಿ ಇದರ ಸಂಯುಕ್ತ ಆಶ್ರಯದಲ್ಲಿ ಮುಲ್ಕಿ ಹೋಬಳಿ ಮಟ್ಟದ ಪ್ರಾಥಮಿಕ ವಿಭಾಗದ ಕಬ್ಬಡಿ ಪಂದ್ಯಾಟವು ದಿನಾಂಕ 09.07.2023 ರಂದು ಮುಲ್ಕಿ ಸರ್ಕಾರಿ ಪದವಿ ಪೂರ್ವ ಕಾಲೇಜು ಇದರ ಮೈದಾನದಲ್ಲಿ ನಡೆಯಿತು.

- Advertisement -

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಿಲ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲೀಲಾವತಿ ಹಾಗೂ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಿಲ್ಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗೋಪಿನಾಥ್ ಪಡಂಗ, ಮುಲ್ಕಿ ನಗರ ಪಂಚಾಯತ್ ಕೌನ್ಸಿಲರ್ ಪುತ್ತುಬಾವ, ಮಂಗಳೂರು ಉತ್ತರ ವಲಯ ದೈಹಿಕ ಪರಿವೀಕ್ಷನಾಧಿಕಾರಿ ಭರತ್ ಕುಂಪಳ್ಳಿ, ಮಂಗಳೂರಿನ ಉತ್ತರ ವಲಯ ಬಿಆರ್ ಪಿ ಹರಿಪ್ರಸಾದ್ ಶೆಟ್ಟಿ, ಮುಲ್ಕಿ ಸರಕಾರಿ ಪ್ರಾಥಮಿಕ ಶಾಲಾ ಎಸೋಸಿಯೇಷನ್ ಅಧ್ಯಕ್ಷರು ಜಯರಾಂ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮುಲ್ಕಿ ಕ್ಲಸ್ಟರ್ ಸಿ.ಆರ್. ಪಿ. ವಿವಿಲಾ ಡಯಾನ, ಪಡಪಡುಂಬೂರು ಕ್ಲಸ್ಟರ್ ಸಿ.ಆರ್.ಪಿ.ಜ್ಯೋತಿ, ಸರಕಾರಿ ಹೈಸ್ಕೂಲ್ ಮುಖ್ಯ ಶಿಕ್ಷಕಿ ಜಯಲಕ್ಷ್ಮಿ, ಶಾಲಾ ಸಂಚಾಲಕ ಅಬೂಬಕರ್, ಶಾಲಾ ಟ್ರಸ್ಟ್ ಅಧ್ಯಕ್ಷ ಎಂ.ಬಿ ಖಾನ್, ಟ್ರಸ್ಟ್ ಕಾರ್ಯದರ್ಶಿ ಅಬ್ಬಾಸ್ ಅಲಿ, ಶಾಲಾ ಮುಖ್ಯೋಪಾಧ್ಯಾಯರಾದ ಹರೀಶ್ ಉಪಸ್ಥಿತರಿದ್ದರು

Join Whatsapp