ಬಿಜೆಪಿಯವರು ಕಮಿಷನ್ ಆರೋಪ ಬಿಟ್ಟು, ವಿಪಕ್ಷ ನಾಯಕನ ನೇಮಕ ಮಾಡಿಕೊಳ್ಳಲಿ: ಪ್ರಿಯಾಂಕ್ ಖರ್ಗೆ

Prasthutha|

ಬೆಂಗಳೂರು: ಮೊದಲು ಬಿಜೆಪಿಯವರು ವಿಪಕ್ಷ ನಾಯಕನನ್ನು ನೇಮಕ ಮಾಡಿಕೊಳ್ಳಲಿ. ಅದು ಬಿಟ್ಟು ಸುಮ್ಮನೆ ಕಮಿಷನ್ ಬಗ್ಗೆ ಆರೋಪ ಮಾಡುವುದು ಬೇಡ ಎಂದು ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

- Advertisement -


ಡಿಸಿಎಂ ಡಿಕೆ ಶಿವಕುಮಾರ್ ಮೇಲೆ 15% ಕಮಿಷನ್ ಆರೋಪ ವಿಚಾರ ಹಾಗೂ ಬಿಜೆಪಿಯಿಂದ ಸರ್ಕಾರದ ಅಭಿಯಾನ ವಿಚಾರವಾಗಿ ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಹತಾಶೆಯಿಂದ ಆರೋಪ ಮಾಡುತ್ತಿದ್ದಾರೆ. ಎಲ್ಲಿ ಹೋಗಿ ಧ್ವನಿ ಏರಿಸಬೇಕು ಅಲ್ಲಿ ಇವರು ಮಾತನಾಡುತ್ತಿಲ್ಲ. ಕೇಂದ್ರದ ನಾಯಕರ ಬಳಿ ಹೋಗಿ ವಿರೋಧ ಪಕ್ಷದ ನಾಯಕನನ್ನು ಕೊಡಿ ಎಂದು ಜೋರಾಗಿ ಮಾತನಾಡಲಿ. ಅದು ಬಿಟ್ಟು ಸುಮ್ಮನೆ ಆರೋಪ ಮಾಡುವುದು ಬೇಡ ಎಂದು ತಿರುಗೇಟು ನೀಡಿದರು.

ಕಾಮಗಾರಿ ನೋಡಿ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ಸಿಎಂ ಮತ್ತು ಡಿಸಿಎಂ ಹೇಳಿದ್ದಾರೆ. ಬಿಜೆಪಿಗೆ ಯಾಕೆ ಇಷ್ಟು ಆತಂಕ? ಕಾಮಗಾರಿ ಆಗದೇ ಹಣ ಎತ್ತಿದ್ದು ಬಿಜೆಪಿಯವರು. ಅದಕ್ಕೆ ಈ ಆತಂಕ. ಬಿಜೆಪಿ ಅವರು ಮೊದಲು ವಿಪಕ್ಷ ಸ್ಥಾನ ನೇಮಕ ಮಾಡಲಿ. ಪ್ಲೇಯಿಂಗ್ 11ನೇ ವ್ಯಕ್ತಿಯನ್ನು ಬಿಟ್ಟು 12ನೇ ವ್ಯಕ್ತಿಯನ್ನು ವಿಪಕ್ಷ ಸ್ಥಾನ ಮಾಡಲು ಹೊರಟಿದ್ದಾರೆ ಎಂದು ಟಾಂಗ್ ನೀಡಿದರು.

Join Whatsapp