‘ನಾಮಪತ್ರ ಹಿಂಪಡೆಯಲು ಬಿಜೆಪಿಯ ಕೆ. ಸುರೇಂದ್ರನ್ 50 ಲಕ್ಷ ರೂ. ಖರ್ಚು ಮಾಡಿದ್ದರು’: BSP ಅಭ್ಯರ್ಥಿ ಕೆ.ಸುಂದರ

Prasthutha|

►47.5 ಲಕ್ಷ ರೂ. ಸ್ಥಳೀಯ ಬಿಜೆಪಿ ನಾಯಕರು ಗುಳುಂ!

- Advertisement -

ಕಾಸರಗೋಡು: ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ತಮ್ಮ ನಾಮಪತ್ರ ಹಿಂಪಡೆಯಲು 50 ಲಕ್ಷ ರೂ. ಖರ್ಚು ಮಾಡಿದ್ದಾರೆ ಎಂದು ಮಂಜೇಶ್ವರಂನಲ್ಲಿ ತಮ್ಮ ನಾಮಪತ್ರವನ್ನು ಹಿಂಪಡೆದ BSP ಅಭ್ಯರ್ಥಿ ಕೆ. ಸುಂದರ ಹೇಳಿಕೆ ನೀಡಿದ್ದಾರೆ.

ಇದರಲ್ಲಿ 47.5 ಲಕ್ಷ ರೂ. ಸ್ಥಳೀಯ ಬಿಜೆಪಿ ನಾಯಕರು ಗುಳುಂ ಮಾಡಿದ್ದಾರೆ ಎಂದು ಸ್ನೇಹಿತನಾದ ಬಿಜೆಪಿ ಕಾರ್ಯಕರ್ತನೊಬ್ಬ ಈ ಬಗ್ಗೆ ತಿಳಿಸಿದ್ದಾನೆ ಎಂದು ಸುಂದರ ಹೇಳಿದ್ದಾರೆ. ಅವರು ತನ್ನನ್ನು ಮಾರ್ಚ್ 20 ರಂದು ಬಿಜೆಪಿಯ ಚುನಾವಣಾ ಸಮಿತಿ ಕಚೇರಿಯಲ್ಲಿ ಇರಿಸಿದ್ದರು. ಬಿಜೆಪಿ ಕಾರ್ಯಕರ್ತರು ರಾತ್ರಿ ಕಚೇರಿಗೆ ಮದ್ಯ ಮತ್ತು ಆಹಾರವನ್ನು ತಂದರು. ಸುರೇಂದ್ರನ್ ನೇರವಾಗಿ ಕರೆ ಮಾಡಿ ಅಂದಿನ ರಾತ್ರಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿ ಕೊಟ್ಟಿದ್ದಾರೆ ಎಂದು ತನಗೆ ಈ ಪ್ರಕರಣದ ಬಗ್ಗೆ ಅರಿವೇ ಇಲ್ಲ ಎಂಬ ಸುರೇಂದ್ರನ್ ಹೇಳಿಕೆಗೆ ಸುಂದರ ತಿರುಗೇಟು ನೀಡಿದ್ದಾರೆ.

- Advertisement -

ಸುರೇಂದ್ರನ್ ತನ್ನೊಂದಿಗೆ ನೇರವಾಗಿ ಫೋನಿನಲ್ಲಿ ಮಾತನಾಡಿದ್ದಾರೆ. ಬಾರ್ ಮತ್ತು ಮನೆ ನಿರ್ಮಿಸಿ ಕೊಡುವುದಾಗಿ ಅವರು ನೇರವಾಗಿ ನನಗೆ ಭರವಸೆ ನೀಡಿದ್ದರು ಎಂದು ಸುಂದರ ಹೇಳಿದರು.

ಕೆ ಸುರೇಂದ್ರನ್ ಮಂಜೇಶ್ವರದಿಂದ ತಮ್ಮ ನಾಮಪತ್ರವನ್ನು ಹಿಂಪಡೆಯಲು 2.5 ಲಕ್ಷ ರೂಪಾಯಿ ಮತ್ತು ಒಂದು ಸ್ಮಾರ್ಟ್ ಫೋನ್ ನೀಡಿದ್ದರು ಎಂದು ಸುಂದರ ಆರಂಭದಲ್ಲಿ ಬಹಿರಂಗಪಡಿಸಿದ್ದರು. 50 ಲಕ್ಷದಲ್ಲಿ 2.5 ಲಕ್ಷ ರೂ. ತನಗೆ ನೀಡಲಾಗಿದ್ದು, ಉಳಿದ 47.5 ಲಕ್ಷ ರೂ.ಗಳನ್ನು ಸ್ಥಳೀಯ ಬಿಜೆಪಿ ಮುಖಂಡರು ಲಪಟಾಯಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

Join Whatsapp