ದೇಶಾದ್ಯಂತ ಬಿಜೆಪಿಯನ್ನು ಸೋಲಿಸುತ್ತೇನೆ : ಮಮತಾ ಬ್ಯಾನರ್ಜಿ

Prasthutha|

ಕೋಲ್ಕತ್ತಾ: ಬಿಜೆಪಿಯನ್ನು ಪೊಳ್ಳು ಭರವಸೆಗಾರರ ಪಕ್ಷವೆಂದು ಕಿಚಾಯಿಸಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮುಂದಿನ ದಿನಗಳಲ್ಲಿ ದೇಶಾದ್ಯಾಂತ ಸೋಲಿಸಲು ಮುತುವರ್ಜಿ ವಹಿಸಲಾಗುವುದೆಂದು ಹೇಳಿದ್ದಾರೆ. ಸೆಪ್ಟೆಂಬರ್ 30 ರಂದು ನಡೆಯುವ ಭಬಾನಿಪುರ ಉಪಚುನಾವಣೆಯ ಟಿ.ಎಂ.ಸಿ ಅಭ್ಯರ್ಥಿಯಾಗಿರುವ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿ ಸುಳ್ಳು ಭರವಸೆಯೊಂದಿಗೆ ಅಧಿಕಾರಕ್ಕೇರಿದ ಬಿಜೆಪಿಯನ್ನು ದೇಶದೆಲ್ಲೆಡೆ ನಿರ್ನಾಮ ಮಾಡಲಾಗುವುದೆಂದು ಗುಡುಗಿದರು.

- Advertisement -

ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಪಕ್ಷವು ಮಮತಾ ಅವರನ್ನು ಬಂಗಾಳಕ್ಕೆ ಸೀಮಿತಗೊಳಿಸದೆ ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಯನ್ನು ಶಕ್ತವಾಗಿ ಎದುರಿಸಲು ಸಜ್ಜುಗೊಳಿಸಿದೆ ಎಂದು ಹೇಳಿದರು. ಭಬಾನಿಪುರ ಉಪಚುನಾವಣೆಯಲ್ಲಿ ಟಿ.ಎಂ.ಸಿ ಯನ್ನು ಸೋಲಿಸುವ ನಿಟ್ಟಿನಲ್ಲಿ ಸಿಪಿಐ (ಎಂ), ಬಿಜೆಪಿ ಪರಸ್ಪರ ಕೈಜೋಡಿಸಿಕೊಂಡು ಮುಂದೆ ಸಾಗುತ್ತಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ವಿರುದ್ಧವೂ ಅವರು ಕಿಡಿ ಕಾರಿದರು.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಮುಂದುವರಿಯುವ ನಿಟ್ಟಿನಲ್ಲಿ ಸೆಪ್ಟೆಂಬರ್ 30 ರಂದು ನಡೆಯುವ ಭಬಾನಿಪುರ ಉಪಚುನಾವಣೆಯಲ್ಲಿ ಗೆಲ್ಲಲೇ ಬೇಕಾದ ಅನಿವಾರ್ಯತೆಗೆ ಸಿಲುಕಿರುವ ಮಮತಾ ಬ್ಯಾನರ್ಜಿ ಅವರ ವಿರುದ್ಧ ಬಿಜೆಪಿ ಮತ್ತು ಸಿಪಿಐ (ಎಂ) ತನ್ನ ಅಭ್ಯರ್ಥಿಗಳಾದ ಪ್ರಿಯಾಂಕ ಟಿಬ್ರೆವಾಲ್ ಮತ್ತು ಶ್ರೀಜಿಬ್ ಬಿಸ್ವಾಸ್ ಅವರನ್ನು ಕ್ರಮವಾಗಿ ಕಣಕ್ಕಿಳಿಸಿದೆ. ಕಾಂಗ್ರೆಸ್ ಈ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ನಿರ್ದರಿಸಿದೆ. ಅಕ್ಟೋಬರ್ 3 ರಂದು ಮತ ಎಣಿಕೆ ನಡೆಯಲಿದೆ

Join Whatsapp