ಟ್ವಿಟ್ಟರ್ ಇಂಡಿಯಾ ಟ್ರೆಂಡ್ಸ್ ನಲ್ಲಿ ಸ್ಥಾನ ಪಡೆದ #JusticeForJasmeen | ಸಂತ್ರಸ್ತೆಗಾಗಿ ಮಿಡಿದ ಮಾನವೀಯ ಹೃದಯಗಳು

Prasthutha|

ಮಂಗಳೂರಿನ ಗರ್ಭಿಣಿ ಹೆಣ್ಣು ಮಗಳು ಖತೀಜಾ ಜಾಸ್ಮೀನ್ ಪರ ಮಾನವೀಯ ಹೃದಯಗಳು ಮಿಡಿದಿದೆ. ಸಂತ್ರಸ್ತೆ ಜಾಸ್ಮೀನ್ ಪರ ಮತ್ತು ಆಕೆಯನ್ನು ಸತಾಯಿಸಿರುವ ವೈದ್ಯರುಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಇಂದು #JusticeForJasmeen ಟ್ವಿಟ್ಟರ್  ಅಭಿಯಾನ ನಡೆಸಲಾಗಿತ್ತು. ಈ ಅಭಿಯಾನ ಟ್ವಿಟ್ಟರಿನಲ್ಲಿ ಟ್ರೆಂಡ್ ಆಗಿದೆ. ಅಭಿಯಾನದ ಒಂದು ಹಂತದಲ್ಲಿ ಇಂಡಿಯಾ ಟ್ರೆಂಡ್ಸ್ ನಲ್ಲಿ ನಾಲ್ಕನೇ ಸ್ಥಾನ ಪಡೆದಿತ್ತು. ಈ ಅಭಿಯಾನದಲ್ಲಿ ಸಂತ್ರಸ್ತೆಯ ಪರ ನ್ಯಾಯಕ್ಕಾಗಿ ಮತ್ತು ಆರೋಪಿತರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸುಮಾರು 77 ಸಾವಿರಕ್ಕೂ ಹೆಚ್ಚು ಟ್ವೀಟ್ ಗಳು ಟ್ವಿಟ್ಟರಿನಲ್ಲಿ ದಾಖಲಾಗಿದೆ.

- Advertisement -

ಇತ್ತೀಚೆಗೆ ಮಂಗಳೂರಿನ 8 ತಿಂಗಳ ಗರ್ಭಿಣಿ ಜಾಸ್ಮೀನ್ ಹೆರಿಗೆ ನೋವಿನಿಂದ ನರಳಾಡುತ್ತಿರುವಾಗ ತನ್ನ ಕನ್ಸಲ್ಟಿಂಗ್ ವೈದ್ಯರಿಂದ ಅವಗಣನೆಗೊಳಗಾಗಿ ಆ ಬಳಿಕ ನಗರದ ಐದಾರು ಆಸ್ಪತ್ರೆಗಳಿಗೆ ಅಲೆದಾಡಿದ ಘಟನೆ ನಡೆದಿತ್ತು. ಆ ಬಳಿಕ ಇದರ ಕುರಿತು ವೈದ್ಯರುಗಳೊಂದಿಗೆ ವಾಗ್ವಾದ ನಡೆಸಿದ್ದ ಕುಟುಂಬದ ಸದಸ್ಯರುಗಳ ಮೇಲೆ ವೈದ್ಯರುಗಳು ಪ್ರಕರಣ ದಾಖಲಿಸಿದ್ದರು. ಆದರೆ ಸಂತ್ರಸ್ತೆ ತನ್ನ ಹೆರಿಗೆ ನೋವಿನ ವೇಳೆಯೂ ಅವಗಣಿಸಿದ್ದ ವೈದ್ಯರುಗಳ ವಿರುದ್ಧ ಪೊಲೀಸ್ ದೂರು ನೀಡಿದ್ದರೂ ಎಫ್ ಐ ಆರ್ ದಾಖಲಿಸಿರಲಿಲ್ಲ. ಈ ಕುರಿತು ಮಾನವೀಯ ಕಾಳಜಿಯುಳ್ಳವರು ಧ್ವನಿ ಎತ್ತಿದ್ದರು. ಆ ಬಳಿಕ ಸಂತ್ರಸ್ತೆ ಹಾಗೂ ಆಕೆಯ ಕುಟುಂಬ ಪತ್ರಿಕಾಗೋಷ್ಠಿಯಲ್ಲಿ ತಾನು ಎದುರಿಸಿದ್ದ ಸಂಕಷ್ಟಗಳ ಕುರಿತು ಮಾಹಿತಿ ನೀಡಿದ್ದರು.



Join Whatsapp