ದೆಹಲಿ ಆಸ್ಪತ್ರೆಯಲ್ಲಿ ನರ್ಸ್‌ ಗಳಿಗೆ ಮಲಯಾಳಂ ಮಾತನಾಡದಂತೆ ಆದೇಶ; ವಿವಾದವಾಗುತ್ತಿದ್ದಂತೆ ಸುತ್ತೋಲೆ ವಾಪಾಸ್

Prasthutha|

ನವದೆಹಲಿ : ದೆಹಲಿ ಆಸ್ಪತ್ರೆಯೊಂದರಲ್ಲಿ ಮಲಯಾಳಂ ಮಾತನಾಡುವ ನರ್ಸ್‌ ಗಳಿಗೆ, ಇಂಗ್ಲಿಷ್‌ ಅಥವಾ ಹಿಂದಿ ಮಾತನಾಡಿ ಆದೇಶ ನೀಡಿದ್ದ ಸರಕಾರ, ವಿವಾದವಾಗುತ್ತಿದ್ದಂತೆ ಆದೇಶ ಹಿಂಪಡೆದ ಘಟನೆ ನಡೆದಿದೆ.

- Advertisement -

ದೆಹಲಿ ಆಸ್ಪತ್ರೆಗಳಲ್ಲಿ ನರ್ಸ್‌ ಗಳು ಏನು ಮಾತನಾಡುತ್ತಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ರೋಗಿಗಳು ದೂರಿದ್ದ ಹಿನ್ನೆಲೆಯಲ್ಲಿ, ಆಸ್ಪತ್ರೆಯಲ್ಲಿ ಮಲಯಾಳಂ ಮಾತನಾಡದಂತೆ ಆದೇಶ ಹೊರಡಿಸಲಾಗಿತ್ತು. ನರ್ಸಿಂಗ್‌ ಸುಪರಿಂಟೆಂಡೆಂಟ್‌ ಈ ಆದೇಶ ಜಾರಿಗೊಳಿಸಿದ್ದರು. ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ನರ್ಸ್‌ ಗಳು ಮಲಯಾಳಂ ಮಾತನಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿತ್ತು.

ಈ ಬಗ್ಗೆ ಸುದ್ದಿಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ವಿವಾದ ಸೃಷ್ಟಿಯಾಗಿ, ಆಕ್ರೋಶ ವ್ಯಕ್ತವಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಅಧಿಕಾರಿ ಗೋವಿಂದ ವಲ್ಲಭ್‌, ನಮ್ಮ ಗಮನಕ್ಕೆ ಬಾರದಂತೆ ಈ ಸುತ್ತೋಲೆ ಜಾರಿಯಾಗಿತ್ತು. ಅದನ್ನು ಹಿಂಪಡೆದಿದ್ದೇವೆ ಎಂದು ಹೇಳಿದ್ದಾರೆ.

- Advertisement -

ಆಸ್ಪತ್ರೆಯಲ್ಲಿ ಬಹುತೇಕ ಸಿಬ್ಬಂದಿ ಮಲಯಾಳಿಗಳು. ಹೀಗಾಗಿ ಅವರು ತಮ್ಮೊಳಗೆ ತಮ್ಮ ಭಾಷೆ ಮಾತನಾಡಿಕೊಳ್ಳುವುದಕ್ಕೆ ಅಡ್ಡಿಪಡಿಸಿದರೆ ಹೇಗೆ ಎಂಬ ಪ್ರಶ್ನೆ ಕೇಳಿಬಂದಿದೆ.

ಈ ಆಸ್ಪತ್ರೆಯಲ್ಲಿ ೩೦೦-೩೫೦ ಮಲಯಾಳಿ ನರ್ಸ್‌ ಗಳಿದ್ದಾರೆ. ಅವರೆಲ್ಲರೂ ರೋಗಿಗಳೊಂದಿಗೆ ಹಿಂದಿಯಲ್ಲೇ ಮಾತನಾಡುತ್ತಾರೆ. ನಾವು ಮಲಯಾಳಂನಲ್ಲಿ ಮಾತನಾಡಿದರೆ ಅವರಿಗೆ ಅರ್ಥ ಆಗುತ್ತದೆ ಎಂದು ಭಾವಿಸಿದ್ದೀರಾ? ಆದರೆ, ಈಗ ನಮ್ಮೊಳಗೆ ಮಲಯಾಳಂ ಮಾತನಾಡಬಾರದು ಎಂದರೆ ಹೇಗೆ ಎಂದು  ಸಿಬ್ಬಂದಿಯೊಬ್ಬರು ಪ್ರಶ್ನಿಸಿದ್ದಾರೆ.

Join Whatsapp