MURL ನೂತನ ಅಧ್ಯಕ್ಷರಾಗಿ ನ್ಯಾಯಮೂರ್ತಿ ಬಿ.ಜಿ. ಕೋಲ್ಸೆ ನೇಮಕ

Prasthutha|

ಚೆನ್ನೈ: ಯುಎಪಿಎ ಮತ್ತು ದಮನಕಾರಿ ಕಾನೂನು ಚಳುವಳಿ (ಎಂ.ಯು.ಆರ್.ಎಲ್) ಯ ನೂತನ ಅಧ್ಯಕ್ಷರಾಗಿ ಬಾಂಬೆ ಹೈಕೋರ್ಟ್ ಮಾಜಿ ನ್ಯಾಯಧೀಶರಾದ ಬಿ.ಜಿ. ಕೋಲ್ಸೆ ಪಾಟೀಲ್ ರನ್ನು ನೇಮಿಸಲಾಗಿದೆ. ದಮನಕಾರಿ ಕಾನೂನುಗಳನ್ನು ತೊಡೆದು ಹಾಕುವ ಆಂದೋಲನವನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ಕೋಲ್ಸೆ ಅವರನ್ನು ನೇಮಕ ಮಾಡಲಾಗಿದೆ ಎಂದು MURL ಕೇಂದ್ರ ಸಮಿತಿ ತಿಳಿಸಿದೆ.

- Advertisement -

ಪ್ರಸಕ್ತ ಚಳುವಳಿಯ ಆರಂಭದಿಂದ MURL, ಇದರ ಅಧ್ಯಕ್ಷರಾಗಿದ್ದ ಮೌಲಾನಾ ಮುಹಮ್ಮದ್ ವಲೀ ರಹ್ಮಾನಿ ಅವರ ನಿಧನಕ್ಕೆ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು.

ನ್ಯಾಯಮೂರ್ತಿ ಬಿ.ಜಿ ಕೋಲ್ಸೆ ಪಾಟೀಲ್ ಅವರ ಹಿರಿಯ ಸಮಾಜ ಸೇವಕರಾಗಿದ್ದು, 1990 ರಲ್ಲಿ ನ್ಯಾಯಾಧೀಶ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಲೋಕಶನ ಆಂದೋಲನ (ಪೀಪಲ್ಸ್ ಡೆಮಾಕ್ರಟಿಕ್ ಮೂವ್ ಮೆಂಟ್) ಅನ್ನು ಸ್ಥಾಪಿಸಿದರು. ಮಾತ್ರವಲ್ಲ ಗ್ರಾಮೀಣ ಜನರು, ಆದಿವಾಸಿ ಸಮುದಾಯ ಮತ್ತು ಸಣ್ಣ ರೈತರು, ಅಲೆಮಾರಿ ಜನಾಂಗಕ್ಕೆ ಸಾಮಾಜಿಕ ಮತ್ತು ಆರ್ಥಿಕ ನ್ಯಾಯಕ್ಕಾಗಿ ಹೋರಾಟ ನಡೆಸುವುದರೊಂದಿಗೆ ಸತ್ಯಶೋಧನ ತಂಡವನ್ನು ರಚನೆ ಮಾಡಿದ್ದರು.

- Advertisement -

ವಿವಿಧ ರಾಜ್ಯಗಳಲ್ಲಿ ನಾಗರಿಕ ಹಕ್ಕುಗಳ ಆಯೋಗಗಳನ್ನು ಸಂಘಟಿಸಲು ಮತ್ತು ವಿಸ್ತರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಮಾತ್ರವಲ್ಲ ರಾಜ್ಯ ಸಂಯೋಜಕರನ್ನು ಆಯ್ಕೆಗೊಳಿಸಲಾಯಿತು. ದೆಹಲಿ, ಪಂಜಾಬ್, ರಾಜಸ್ಥಾನ, ಉತ್ತರಪ್ರದೇಶ, ಅಸ್ಸಾಂ, ಕೇರಳ, ತಮಿಳ್ನಾಡು, ಕರ್ನಾಟಕದ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.

ಸಭೆಯ ಕೊನೆಯಲ್ಲಿ ಬಿಜೆಪಿ ಆಡಳಿತದಲ್ಲಿ ದಮನಕಾರಿ ಕಾನೂನುಗಳ ಎಂಬ ವಿಷಯದ ಕುರಿತು ರಾಷ್ಟ್ರೀಯ ವಿಚಾರ ಸಂಕೀರ್ಣವನ್ನು ಆಯೋಜಿಸಲಾಯಿತು.

Join Whatsapp