ಮಂಗಳೂರು: ಪಬ್ ಒಳ ಹೊಕ್ಕಿ ಪಾರ್ಟಿ ನಿಲ್ಲಿಸಿದ ಸಂಘಪರಿವಾರ !

Prasthutha|

ಮಂಗಳೂರು: ನಗರದ ರಿ-ಸೈಕಲ್ ದಿ ಲಾಂಚ್ ಪಬ್‌ನಲ್ಲಿ ಪಾರ್ಟಿ ನಡೆಸುತ್ತಿದ್ದ ಖಾಸಗೀ ಕಾಲೇಜು ವಿದ್ಯಾರ್ಥಿಗಳನ್ನು ಸಂಘಪರಿವಾರದ ಕಾರ್ಯಕರ್ತರು ತಡೆದ ಘಟನೆ ಇಂದು ನಡೆದಿದೆ.

- Advertisement -

ನಗರದ ಖಾಸಗೀ ಕಾಲೇಜಿನ ಪದವಿ ವಿದ್ಯಾರ್ಥಿಗಳು ಬೀಳ್ಕೊಡುಗೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪಾರ್ಟಿ ಆಯೋಜಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ಸಂಘಪರಿವಾರದ ಕಾರ್ಯಕರ್ತರು ಎನ್ನಲಾದವರು ಪಬ್ ಒಳಗೆ ನುಗ್ಗಿದ್ದು ಮೋಜಿನಲ್ಲಿ ನಿರತರಾದವರಿಗೆ ಎಚ್ಚರಿಕೆ ನೀಡಿ ಹೊರ ಕಳಿಸಿದ್ದಾರೆ.

ಪಾರ್ಟಿಯನ್ನು ಅರ್ಧದಲ್ಲೇ ನಿಲ್ಲಿಸಿ ವಿದ್ಯಾರ್ಥಿಗಳು ತೆರಳಿದ್ದಾರೆ ಎಂದು ತಿಳಿದುಬಂದಿದೆ.

- Advertisement -

ಸ್ಥಳಕ್ಕಾಗಮಿಸಿದ ಪೊಲೀಸರು ಸಂಘಪರಿವಾರದ ಕಾರ್ಯಕರ್ತರನ್ನು ಚದುರಿಸಿದ್ದಾರೆ.

Join Whatsapp