ಹೊಸದಿಲ್ಲಿ: ದೇಶದ ಪ್ರತಿಯೊಂದು ಸಂಸ್ಥೆಯನ್ನು ವ್ಯವಸ್ಥಿತವಾಗಿ ನಾಶಪಡಿಸಲಾಗುತ್ತಿದೆ ಎಂದು ದೆಹಲಿ ಹೈಕೋರ್ಟ್ ಮಾಜಿ ನ್ಯಾಯಮೂರ್ತಿ ಅಜಿತ್ ಪ್ರಕಾಶ್ ಶಾ ಹೇಳಿದ್ದಾರೆ. ‘‘ಇಂದು ಭಾರತದಲ್ಲಿ ಕಾರ್ಯನಿರ್ವಾಹಕ ಹೊಣೆಗಾರಿಕೆಯನ್ನು ನಿರ್ವಹಿಸಲು ವಿನ್ಯಾಸಗೊಳಿಸಲಾದ ಪ್ರತಿಯೊಂದು ಸಂಸ್ಥೆ, ಕಾರ್ಯವಿಧಾನ ಅಥವಾ ಉಪಕರಣವನ್ನು ವ್ಯವಸ್ಥಿತವಾಗಿ ನಾಶಪಡಿಸಲಾಗುತ್ತಿದೆ. 2014ರಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಈ ವಿನಾಶ ಪ್ರಾರಂಭವಾಗಿದೆ. ನಾವು ಯುದ್ಧದ ಸ್ಥಿತಿಯಲ್ಲಿಲ್ಲದಿರಬಹುದು. ಆದರೆ ನಾವು ತುರ್ತು ಪರಿಸ್ಥಿತಿಯಲ್ಲಿದ್ದೇವೆ. ಇವೆಲ್ಲದಕ್ಕೂ ಕಾರಣ ಕೇಂದ್ರ ಸರಕಾರ’’ ಎಂದು ಅವರು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಪ್ರಸ್ತುತ ಆಡಳಿತದ ವಿರುದ್ಧ ನ್ಯಾಯಮೂರ್ತಿ ಶಾ ತೀವ್ರವಾಗಿ ಟೀಕಿಸಿದ್ದಾರೆ. ಶಾ ಅವರು ಈ ಹಿಂದೆ ಭಾರತದ ಕಾನೂನು ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.