‘ಸರ್ವಾಧಿಕಾರಿ ಧೋರಣೆ, ಫ್ಯಾಶಿಸ್ಟ್ ಸರಕಾರ’ : ರಾಜ್ಯಸಭಾ ಸಂಸದರನ್ನು ಅಮಾನತುಗೊಳಿಸಿದ್ದನ್ನು ವಿರೋಧಿಸಿ ಮಮತಾ

Prasthutha|

ನವದೆಹಲಿ: ರಾಜ್ಯಸಭೆಯಿಂದ ಎಂಟು ಸಂಸದರನ್ನು ಅಮಾನತು ಮಾಡಿರುವುದು ಬಿಜೆಪಿ ಸರಕಾರದ ಸರ್ವಾಧಿಕಾರಿ ಧೋರಣೆಯನ್ನು ಎತ್ತಿ ತೋರಿಸುತ್ತದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರಕಾರದ ಮೂರು ಕೃಷಿ ಮಸೂದೆಯ ವಿರುದ್ಧ ವಿರೋಧ ವ್ಯಕ್ತಪಡಿಸಿದ್ದಕ್ಕಾಗಿ ಎಂಟು ಸಂಸದರನ್ನು ಹಿಂಸಾತ್ಮಕ ನಡವಳಿಕೆಗಳ ಕಾರಣ ನೀಡಿ ಅಮಾನತುಗೊಳಿಸಲಾಗಿದೆ. “ರೈತರ ಹಿತಾಸಕ್ತಿ ಕಾಪಾಡಲು ಹೋರಾಡಿದ ಎಂಟು ಸಂಸದರನ್ನು ಅಮಾನತುಗೊಳಿಸಿರುವುದು ದುರದೃಷ್ಟಕರ, ಪ್ರಜಾಪ್ರಭುತ್ವ ಮಾನದಂಡಗಳನ್ನು ಮತ್ತು ತತ್ವಗಳನ್ನು ಗೌರವಿಸದ ಈ ಸರಕಾರದ ಸರ್ವಾಧಿಕಾರಿ ಧೋರಣೆಯ ಪ್ರತಿಬಿಂಬವಾಗಿದೆ” ಎಂದು ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.

- Advertisement -

“ನಾವು ಬಿಟ್ಟುಕೊಡುವುದಿಲ್ಲ, ನಾವು ಈ ಫ್ಯಾಶಿಸ್ಟ್ ಸರಕಾರವನ್ನು ಸಂಸತ್ತಿನಲ್ಲಿ ಮತ್ತು ಬೀದಿಗಳಲ್ಲಿ ಎದುರಿಸುತ್ತೇವೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.  ಈ ಮಸೂದೆಗೆ ಸಂಬಂಧಿಸಿದ ಚರ್ಚೆಯ ನಡುವೆ ಆದಿತ್ಯವಾರ ರಾಜ್ಯಸಭೆಯಲ್ಲಿ ನಡೆದ ಪ್ರತಿಭಟನೆಗೆ ರಾಜ್ಯಸಭಾಧ್ಯಕ್ಷ ವೆಂಕಯ್ಯ ನಾಯ್ಡು ಸಂಸತ್ತಿನ ಮುಂಗಾರು ಅಧಿವೇಶನದಿಂದ ವಿರೋಧ ಪಕ್ಷಗಳ ಎಂಟು ಸಂಸದರನ್ನು ಒಂದು ವಾರ ಅಮಾನತು ಮಾಡಲಾಗಿದೆ. ಆದರೆ ಅವರು ರಾಜ್ಯಸಭೆಯಿಂದ ಕೆಳಗಿಳಿಯಲು ನಿರಾಕರಿಸಿದರು. ಅದರಿಂದಾಗಿ ರಾಜ್ಯಸಭೆಯನ್ನು ಒಂದಕ್ಕಿಂತ ಹೆಚ್ಚು ಬಾರಿ ಮುಂದೂಡಲಾಯಿತು. ಅದೇ ಸಮಯ ಸದಸ್ಯರಿಗೆ ಸ್ವತಃ ವಿವರಿಸಲು ಅವಕಾಶ ನೀಡಬೇಕೆಂದು ಪ್ರತಿಪಕ್ಷ ಕೇಳಿಕೊಂಡಿತ್ತು.

Join Whatsapp