►ಸರ್ವಪಕ್ಷ ಸಭೆ ಆಯೋಜನೆ
ಚಂಡೀಗಢ: ಪಂಜಾಬ್ ನಲ್ಲಿ BSF ನ ಅಧಿಕಾರವ್ಯಾಪ್ತಿ ವಿಸ್ತರಣೆಗೆ ವ್ಯಾಪಕ ಪ್ರತಿಭಟನೆಗಳು ಭುಗಿಲೆದ್ದಿದ್ದು, ಬಿಜೆಪಿ ಹೊರತುಪಡಿಸಿ ಆಡಳಿತ, ವಿರೋಧ ಪಕ್ಷಗಳೂ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಹರಿಹಾಯ್ದಿದೆ. ಈ ಕುರಿತು ಚರ್ಚಿಸಲು ರಾಜ್ಯ ಸರ್ಕಾರ ಸರ್ವಪಕ್ಷ ಸಭೆ ಕರೆದಿದೆ.
ಸಭೆಯ ಅಂಗವಾಗಿ ವಿವಿಧ ಪಕ್ಷದ ಮುಖಂಡರು ಪಂಜಾಬ್ ಭವನಕ್ಕೆ ಆಗಮಿಸಿದ್ದಾರೆ. ವಿರೋಧ ಪಕ್ಷವಾದ ಆಮ್ ಆದ್ಮಿ ಪಕ್ಷದ ಭಗವತ್ ಮನ್ನಾ ಮತ್ತು ಅಮನ್ ಅರೋರಾ, ಅಕಾಲಿದಳದ ದಲ್ಜಿತ್ ಚೀಮಾ ಮತ್ತು ಚಂದುಮಾಜ್ರಾ ಹಾಜರಾಗಿದ್ದಾರೆ.
ಪಂಜಾಬ್ ಉಪ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ರಾಂದವಾ ಮತ್ತು ಹಣಕಾಸು ಸಚಿವ ಮನ್ ಪ್ರೀತ್ ಸಿಂಗ್ ಬಾದಲ್ ಸಭೆಯಲ್ಲಿ ಭಾಗವಹಿಸಲಿದ್ದಾರೆ.
BSF ಮತ್ತು ರಾಜ್ಯ ಪೊಲೀಸರ ನಡುವೆ ಯಾವುದೇ ಘರ್ಷಣೆ ಇಲ್ಲ ಎಂದು ಬಿಜೆಪಿ ಮುಖಂಡರು ಸಭೆಯನ್ನು ಬಹಿಷ್ಕರಿಸಿದ್ದಾರೆ.
ಕೇಂದ್ರ ಸರ್ಕಾರವು ಗಡಿ ರಾಜ್ಯಗಳಲ್ಲಿ BSF ಅಧಿಕಾರ ವ್ಯಾಪ್ತಿಯನ್ನು 50 ಕಿಮೀ ಹೆಚ್ಚಿಸಿದೆ.