ಜುನೈದ್- ನಾಸಿರ್ ಹತ್ಯೆ ಪ್ರಕರಣ: ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿದ SDPI ನಿಯೋಗ

Prasthutha|

ಸಂತ್ರಸ್ತ ಕುಟುಂಬಕ್ಕೆ ತಲಾ 1 ಕೋಟಿ ರೂ.ಪರಿಹಾರ ನೀಡುವಂತೆ ಆಗ್ರಹ

- Advertisement -


ಜೈಪುರ: ರಾಜಸ್ಥಾನದಲ್ಲಿ ಸಂಘಪರಿವಾರದಿಂದ ಹತ್ಯೆಗೀಡಾದ ಜುನೈದ್ ಮತ್ತು ನಾಸಿರ್ ಅವರ ಸಂತ್ರಸ್ತ ಕುಟುಂಬವನ್ನು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್’ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಾಸ್ಮಿನ್ ಫಾರೂಕಿ ನೇತೃತ್ವದ ನಿಯೋಗವು ಭೇಟಿ ಮಾಡಿ, ಸಾಂತ್ವನ ಹೇಳಿತು. ಕುಟುಂಬಕ್ಕೆ ನ್ಯಾಯ ಒದಗಿಸಲು ಸಾಧ್ಯವಿರುವ ಎಲ್ಲ ಸಹಾಯದ ಭರವಸೆ ನಿಯೋಗ ಇದೇ ವೇಳೆ ನೀಡಿತು.


ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಬಂಧಿಸುವಂತೆ ಹಾಗೂ ಸಂತ್ರಸ್ತ ಕುಟುಂಬಗಳಿಗೆ ತಲಾ 1 ಕೋಟಿ ರೂ.ಗಳ ಪರಿಹಾರ ಮತ್ತು ಕುಟುಂಬ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗವನ್ನು ನೀಡುವಂತೆ ಈ ಸಂದರ್ಭದಲ್ಲಿ ನಿಯೋಗ ಒತ್ತಾಯಿಸಿತು.

- Advertisement -


ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಾಸ್ಮಿನ್ ಫಾರೂಕಿ ನೇತೃತ್ವದ ಎಸ್ ಡಿಪಿಐ ನಿಯೋಗವು ಭರತ್ ಪುರ ವಲಯ ಐಜಿ ಗೌರವ್ ಶ್ರೀವಾಸ್ತವ ಅವರನ್ನು ಭೇಟಿ ಮಾಡಿ, ಪ್ರಕರಣದ ಆರೋಪಿಗಳನ್ನು ಶೀಘ್ರವಾಗಿ ಬಂಧಿಸುವಂತೆ ಆಗ್ರಹಿಸಿತು.
ಫೆ. 15ರಂದು ಹರಿಯಾಣದ ಭಿವಾನಿಯಲ್ಲಿ ಜುನೈದ್ ಮತ್ತು ನಾಸಿರ್ ಅವರನ್ನು ಅಪಹರಿಸಿದ ಬಜರಂಗದಳ ಕಾರ್ಯಕರ್ತರು ಅವರನ್ನು ಕಾರಿನೊಳಗೆ ಹಾಕಿ ಬೆಂಕಿ ಹಚ್ಚಿ ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ.

Join Whatsapp