ಜೈಪುರ: ರಾಜಸ್ಥಾನದ ಜುನೈದ್ ಮತ್ತು ನಾಸಿರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕರ ಕುಟುಂಬವನ್ನು ಜಮಾಅತೆ ಇಸ್ಲಾಮಿ ಹಿಂದ್ ನ ನಿಯೋಗ ಭೇಟಿಯಾಗಿದ್ದು, ರಾಜಸ್ಥಾನ ಸರ್ಕಾರ ಈ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದೆ.
ಜಮಾಅತ್ ಇಸ್ಲಾಮಿ ಹಿಂದ್ ನ ರಾಷ್ಟ್ರೀಯ ಉಪಾಧ್ಯಕ್ಷ ಮುಹಮ್ಮದ್ ಸಲೀಂ ಇಂಜಿನೀಯರ್ ಅವರ ನೇತೃತ್ವದಲ್ಲಿ ನಿಯೋಗ ಭೇಟಿ ನೀಡಿದ್ದು, ರಾಜಸ್ಥಾನ ಪೊಲೀಸರು ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದೆ.
ಫೆ. 15ರಂದು ಹರಿಯಾಣದ ಬಿವಾನಿಯಲ್ಲಿ ಜುನೈದ್ ಮತ್ತು ನಾಸಿರ್ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಬೆಂಕಿ ಹಚ್ಚಿ ಅವರನ್ನು ಸಜೀವ ದಹನಗೊಳಿಸಲಾಗಿತ್ತು. ಪ್ರಕರಣ ಸಂಬಂಧ ಬಜರಂಗದಳ ಕಾರ್ಯಕರ್ತರಾದ ರಿಂಕು ಸೈನಿ, ಲೋಕೇಶ್ ಸಿಂಗ್, ಶ್ರೀಕಾಂತ್ ‘ನನ್ನು ಪೊಲೀಸರು ಬಂಧಿಸಿದ್ದರು.