ಹೊಸದಿಲ್ಲಿ: ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮುಹಮ್ಮದ್ ಝುಬೈರ್ ಅವರನ್ನು ದಿಲ್ಲಿ ಪೊಲೀಸ್ ವಿಶೇಷ ಸೆಲ್ ಪೊಲೀಸರು ಲ್ಯಾಪ್ ಟಾಪ್ ಅನ್ನು ಪರಿಶೀಲಿಸಲು ಬೆಂಗಳೂರಿಗೆ ಕರೆತಂದಿದ್ದಾರೆ.
ಝುಬೈರ್ ಸಾಮಾಜಿಕ ಮಾಧ್ಯಮ ಸೈಟ್ ಗಳಲ್ಲಿ ವಿವಿಧ ವಿಷಯಗಳನ್ನು ಅಪ್ಲೋಡ್ ಮಾಡಲು ಬಳಸಿದ್ದ ಲ್ಯಾಪ್ ಟಾಪ್ ಅನ್ನು ವಶಪಡಿಸಿಕೊಳ್ಳಲು ಝುಬೈರ್ ಜೊತೆಗೆ ಪೊಲೀಸರು ಬೆಂಗಳೂರಿಗೆ ಬಂದಿದ್ದಾರೆ.
ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಲ್ಲಿ ಝುಬೈರ್ ಅವರನ್ನು ದೆಹಲಿ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು.