ಪತ್ರಕರ್ತ ಮುಹಮ್ಮದ್ ಝುಬೈರ್ ಗೆ 14 ದಿನ ನ್ಯಾಯಾಂಗ ಬಂಧನ

Prasthutha|

ಲಕ್ನೋ: ಆಲ್ಟ್ ನ್ಯೂಸ್ ಪತ್ರಕರ್ತ ಮುಹಮ್ಮದ್ ಝುಬೈರ್ ಅವರಿಗೆ ಉತ್ತರಪ್ರದೇಶದ ಲಖಿಂಪುರ ನ್ಯಾಯಾಲಯವೊಂದು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

- Advertisement -

ಸೀತಾಪುರ ಜೈಲಿನಿಂದ ಝುಬೈರ್ ಅವರನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಮುಹಮ್ಮದಿ ಸೆಷನ್ಸ್ ಕೋರ್ಟ್ ಝುಬೈರ್ ಅವರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.

ಖಾಸಗಿ ಚಾನೆಲ್ ವಿರುದ್ಧ 2021ರ ಸೆಪ್ಟಂಬರ್ ನಲ್ಲಿ ಝುಬೈರ್ ಮಾಡಿದ್ದ ಟ್ವೀಟ್ ಸಂಬಂಧ ಲಖಿಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.



Join Whatsapp