ಹಿಂದುತ್ವದ ದಾಳಿಯ ಬಗ್ಗೆ ಟ್ವೀಟ್ । ಆರ್ಟಿಕಲ್ 14 ಪೋರ್ಟಲ್ ವರದಿಗಾರ ಮೀರ್ ಫೈಸಲ್ ವಿರುದ್ಧ ಪ್ರಕರಣ

Prasthutha|

ನವದೆಹಲಿ: ದೆಹಲಿಯಲ್ಲಿ ನಡೆದ ಸಂಘಪರಿವಾರದ ಕಾರ್ಯಕ್ರಮವೊಂದರಲ್ಲಿ ಏಳು ಪತ್ರಕರ್ತರನ್ನು ಗುರಿಯಾಗಿಸಿದ್ದನ್ನು ವಿರೋಧಿಸಿ ಟ್ವೀಟ್ ಮಾಡಿದ್ದಕ್ಕಾಗಿ ಪತ್ರಕರ್ತ ಮೀರ್ ಫೈಸಲ್ ಮತ್ತು ನ್ಯೂಸ್ ಪೋರ್ಟಲ್ ಆರ್ಟಿಕಲ್ 14 ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

- Advertisement -

ಕಳೆದ ಭಾನುವಾರ ನವದೆಹಲಿಯ ಬುರಾರಿ ಎಂಬಲ್ಲಿ ನಡೆದ ಹಿಂದೂ ಮಹಾಪಂಚಾಯತ್ ಕಾರ್ಯಕ್ರಮದಲ್ಲಿ ಮೀರ್ ಫೈಸಲ್ ಸೇರಿದಂತೆ ಏಳು ಪತ್ರಕರ್ತರನ್ನು ಗುರಿಯಾಗಿಸಲಾಗಿತ್ತು.

ಆರ್ಟಿಕಲ್ 14 ಪರವಾಗಿ ವರದಿ ಮಾಡುತ್ತಿದ್ದ ಪತ್ರಕರ್ತ ಅರ್ಬಾಬ್ ಅಲಿ ಎಂಬವರು ಈ ಕಾರ್ಯಕ್ರಮದಲ್ಲಿ ಧರ್ಮ ನಿಂದನೆಗೊಳಗಾದ ಮುಸ್ಲಿಮ್ ವರದಿಗಾರರಲ್ಲಿ ಒಬ್ಬರು.

- Advertisement -

ಸದ್ಯ ಫೈಸಲ್ ಮತ್ತು ನ್ಯೂಸ್ ಆರ್ಟಿಕಲ್ 14 ವಿರುದ್ಧ ಐಪಿಸಿ ಸೆಕ್ಷನ್ 505 (2) ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಮಧ್ಯೆ ಅರ್ಬಾಬ್ ಅಲಿ, ಮೀರ್ ಫೈಸಲ್, ಶಾಹಿದ್ ತಂತ್ರಿ, ಎಂ.ಡಿ. ಮೆಹರ್ಬಾನ್, ಮೇಘನಾದ್ ಬೋಸ್, ಶಿವಂಗಿ ಸಕ್ಸೇನಾ ಮತ್ತು ರೋನಕ್ ಭಟ್ ಎಂಬ ಪತ್ರಕರ್ತರ ಮೇಲೆ ಸಂಘಪರಿವಾರದ ಕಾರ್ಯಕರ್ತರು ಗಂಭೀರವಾಗಿ ಹಲ್ಲೆ ನಡೆಸಿದ್ದರು.

ಇದಕ್ಕೆ ಸಂಬಂಧಿಸಿದಂತೆ ನ್ಯೂಸ್ ಲಾಂಡ್ರಿಯ ಸಕ್ಸೇನಾ ಮತ್ತು ಅರ್ಬಾಬ್ ಅಲಿ ಎಂಬವರು ನೀಡಿದ್ದ ದೂರಿನ ಆಧಾರದಲ್ಲಿ ಸಂಘಪರಿವಾರದ ಕಾರ್ಯಕರ್ತರ ವಿರುದ್ಧ ಐಪಿಸಿ ಸೆಕ್ಷನ್ 323, 341, 34ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Join Whatsapp