ಜ್ಞಾನವಾಪಿ ಮಸ್ಜಿದ್ ವೈಜ್ಞಾನಿಕ ಸಮೀಕ್ಷೆ: ವರದಿ ಸಲ್ಲಿಸಲು ಮತ್ತೆ ಸಮಯ ಕೇಳಿದ ಎಎಸ್‌ಐ

Prasthutha|

ವಾರಣಾಸಿ: ಜ್ಞಾನವಾಪಿ ಮಸ್ಜಿದ್ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆ ವರದಿ ಸಲ್ಲಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಜಿಲ್ಲಾ ನ್ಯಾಯಾಲಯಕ್ಕೆ ಮತ್ತೆ ಮೂರು ವಾರಗಳ ಸಮಯ ಕೇಳಿದೆ.

- Advertisement -

ನವೆಂಬರ್ 28 ರೊಳಗೆ ಜ್ಞಾನವಾಪಿ ಮಸ್ಜಿದ್ ಸಂಕೀರ್ಣದ ವರದಿ ಸಲ್ಲಿಸುವಂತೆ ಜಿಲ್ಲಾ ನ್ಯಾಯಾಲಯ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಸೂಚಿಸಿತ್ತು. ಗಡುವಿಗೆ ಒಂದು ದಿನ ಮೊದಲು ಇಲಾಖೆ ಮತ್ತೆ ಕಾಲಾವಕಾಶ ಕೋರಿ ಅರ್ಜಿ ಸಲ್ಲಿಸಿದೆ.

ಪುರಾತತ್ವಶಾಸ್ತ್ರಜ್ಞರು, ಸರ್ವೇಯರ್ಗಳು ಮತ್ತು ಇತರ ತಜ್ಞರು ಸಂಗ್ರಹಿಸಿದ ವಿವಿಧ ರೀತಿಯ ದತ್ತಾಂಶಗಳ ಮೇಲೆ ತಜ್ಞರು ಕೆಲಸ ಮಾಡುತ್ತಿದ್ದಾರೆ. ವಿವಿಧ ತಜ್ಞರು ಮತ್ತು ವಿಭಿನ್ನ ಸಾಧನಗಳಿಂದ ರಚಿಸಲಾದ ಮಾಹಿತಿಯನ್ನು ಒಟ್ಟುಗೂಡಿಸುವುದು ಕಷ್ಟಕರ ಮತ್ತು ನಿಧಾನ ಪ್ರಕ್ರಿಯೆಯಾಗಿದೆ. ಆದ್ದರಿಂದ ಅಂತಿಮ ವರದಿ ಸಿದ್ಧಪಡಿಸಲು ಇನ್ನೂ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹೇಳಿದೆ.



Join Whatsapp