ಹರ್ಯಾಣದಲ್ಲಿ ತಥಾಕಥಿತ ‘ಲವ್ ಜಿಹಾದ್’ ಕಾನೂನು ಅಂಗೀಕಾರ । ವಿರೋಧ ವ್ಯಕ್ತಪಡಿಸಿದ ಮಿತ್ರಪಕ್ಷ JJP !

Prasthutha|

ಹರಿಯಾಣದ ಬಿಜೆಪಿ ಸರ್ಕಾರ ‘ಲವ್ ಜಿಹಾದ್’ ವಿರೋಧಿ ಕಾನೂನನ್ನು ಅಂಗೀಕರಿಸಿದೆ.  ಆದರೆ, ಬಿಜೆಪಿ ಮಿತ್ರ ಪಕ್ಷ ಜನನಾಯಕ್ ಜನತಾ ಪಕ್ಷದ (ಜೆಜೆಪಿ) ಮುಖಂಡ ಮತ್ತು ಉಪಮುಖ್ಯಮಂತ್ರಿ ದುಶ್ಯಂತ್ ಚೌಟಾಲಾ ಅವರು “ಲವ್ ಜಿಹಾದ್” ಎಂಬ ಕಾನೂನನ್ನು ಒಪ್ಪಲು ಸಾಧ್ಯವಿಲ್ಲ, ಪಕ್ಷವು ಇದನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ.

- Advertisement -

ಲವ್ ಜಿಹಾದ್‌‌ ವಿರೋಧಿ ಕಾನೂನನ್ನು ನಮ್ಮ ಪಕ್ಷ ಬೆಂಬಲಿಸುವುದಿಲ್ಲ.  ಬಲವಂತದ ಮತಾಂತರಗಳನ್ನು ತಡೆಯಲು ನಮಗೆ ಕಾನೂನು ಬೇಕು. ನಾವು ಅದನ್ನು ಬೆಂಬಲಿಸುತ್ತೇವೆ. ಮದುವೆಯ ನಂತರ ತನ್ನ ಸಂಗಾತಿಯ ಧರ್ಮವನ್ನು ಸ್ವೀಕರಿಸಲು ಯಾವುದೇ ನಿರ್ಬಂಧವಿಲ್ಲ’ ಎಂದು ದುಶ್ಯಂತ್ ಚೌಟಾಲಾ ಪ್ರತಿಕ್ರಿಯಿಸಿದ್ದಾರೆ. ರೈತರ ಹೋರಾಟಕ್ಕೆ ಸಂಬಂಧಿಸಿದಂತೆ ಬಿಜೆಪಿಯ ವಿರೋಧಿ ನಿಲುವನ್ನು ತಾಳಿದ್ದ ಜೆಜೆಪಿ ಲವ್ ಜಿಹಾದ್ ಕಾಯ್ದೆಯ ವಿರುದ್ಧವೂ ಧ್ವನಿ ಎತ್ತಿದೆ.

- Advertisement -