ತಾಜ್ ಮಹಲ್ ಗೆ ಬಾಂಬ್ ಬೆದರಿಕೆ । ಬಂಧಿತ ದುಷ್ಕರ್ಮಿ ವಿಮಲ್ ಕುಮಾರ್ ಸಿಂಗ್ ಮಾನಸಿಕ ಅಸ್ವಸ್ಥನಂತೆ !!

Prasthutha|

ಆಗ್ರಾದ ತಾಜ್ ಮಹಲ್ ಒಳಗೆ ಬಾಂಬ್ ಇದೆಯೆಂದು ಬೆದರಿಕೆ ಕರೆ ಮಾಡಿದ್ದ ದುಷ್ಕರ್ಮಿಯನ್ನು ಉತ್ತರ ಪ್ರದೇಶದ ಫಿರೋಝಾಬಾದ್ ಪೊಲೀಸರು ಬಂಧಿಸಿದ್ದಾರೆ. ಆರೋಪಿ ವಿಮಲ್ ಕುಮಾರ್ ಸಿಂಗ್ ಫಿರೋಝಾಬಾದಿನ ನಾಖಿ ಎಂಬ ಪ್ರದೇಶದವನಾಗಿದ್ದಾನೆ ಎಂದು ತಿಳಿದು ಬಂದಿದೆ. ವಿಪರ್ಯಾಸವೆಂಬಂತೆ ಮಾಧ್ಯಮಗಳು ಮತ್ತು ಪೊಲೀಸರು ಆತನನ್ನು ಮಾನಸಿಕ ಅಸ್ವಸ್ಥ ಮತ್ತು ಕೆಲಸ ಸಿಗದೆ ಹತಾಶನಾಗಿ ಈ ಬೆದರಿಕೆ ಕರೆ ಮಾಡಿದ್ದಾರೆ ಎಂದು ಬಿಂಬಿಸುತ್ತಿದ್ದಾರೆ.

ಈ ರೀತಿಯ ಪ್ರವೃತ್ತಿ ಈಗೀಗ ಅವ್ಯಾಹತವಾಗಿ ಬೆಳೆದು ಬರುತ್ತಿದ್ದು, ಬೆದರಿಕೆ ಕರೆ ಮಾಡಿದ ವ್ಯಕ್ತಿಗೆ ಮಾನಸಿಕ ಅಸ್ವಸ್ಥತೆ ಇದೆ, ಆತ ಮಾನಸಿಕ ಖಿನ್ನತೆಯಿಂದ ಬಲಲುತ್ತಿದ್ದಾನೆ ಎಂಬ ಸಬೂಬುಗಳು ಆತ ಬಂಧಿತನಾದ ನಂತರ ಕೇಳಿ ಬರುತ್ತದೆ. ಈ ಹಿಂದೆಯೂ ಈ ರೀತಿಯ ಬೆದರಿಕೆ ಕರೆ ಮಾಡಿದವರ ಹಿನ್ನೆಲೆ ಅರಿತುಕೊಂಡು ಅವರನ್ನು ಮಾನಸಿಕ ಅಸ್ವಸ್ಥರ ಪಟ್ಟಿಗೆ ಸೇರಿಸಿದ ಉದಾಹರಣೆಗಳು ಇದೆ. ಉತ್ತರ ಪ್ರದೇಶದ ಗೋರಖ್ಪುರದಲ್ಲಿ ಒಬ್ಬನೇ ವ್ಯಕ್ತಿ ಎರಡು ಬಾರಿ ಹುಸಿ ಉಗ್ರರ ಬೆದರಿಕೆ ಕರೆ ಮಾಡಿದಾಗಲೂ ಆತನನ್ನು ಮಾನಸಿಕ ಅಸ್ವಸ್ಥ ಎಂಬಂತೆ ಬಿಂಬಿಸಿರುವುದು ಇಲ್ಲಿ ಗಮನಾರ್ಹವಾಗಿದೆ.

- Advertisement -

ಇಂದು ಬೆಳಗ್ಗೆ ಪ್ರವಾಸಿಗರು ತಾಜ್ ಮಹಲ್ ಒಳಗಡೆ ಇರುವಾಗಲೇ ಅಲ್ಲಿ ಬಾಂಬ್ ಇರಿಸಿದ್ದೇನೆಂದು ಆರೋಪಿ ವಿಮಲ್ ಕುಮಾರ್ ಸಿಂಗ್ 112ಗೆ ಕರೆ ಮಾಡಿ ಬೆದರಿಕೆ ಹಾಕಿದ್ದ. ಕೂಡಲೇ ಕಾರ್ಯಪ್ರವೃತ್ತರಾಗಿದ್ದ ಪೊಲೀಸರು ಪ್ರವಾಸಿಗರನ್ನು ಅಲ್ಲಿಂದ ತೆರವುಗೊಳಿಸಿ ತಾಜ್ ಮಹಲ್ ಗೆ ಪ್ರವೇಶವನ್ನು ನಿರ್ಬಂಧ ವಿಧಿಸಿದ್ದರು.

- Advertisement -