2016ರ ಗಲಭೆ ಪ್ರಕರಣ: ಜಿಗ್ನೇಶ್ ಮೇವಾನಿಗೆ ಆರು ತಿಂಗಳು ಜೈಲು

Prasthutha|

ಅಹಮದಾಬಾದ್: 2016ರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಮತ್ತು ಇತರ 18 ಮಂದಿಗೆ ಅಹಮದಾಬಾದ್ ನ್ಯಾಯಾಲಯ, ಆರು ತಿಂಗಳ ಸಾಮಾನ್ಯ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ.

- Advertisement -

ಮೇವಾನಿ ಮತ್ತು ಅವರ ಸಹಚರರು ನಡೆಸಿದ ರಸ್ತೆ ತಡೆ ಆಂದೋಲನಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಈ ಆದೇಶ ನೀಡಿದೆ.

ಈ ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪಿ.ಎನ್ ಗೋಸ್ವಾಮಿ, ಗುಜರಾತ್ ಶಾಸಕ ಮೇವಾನಿ ಮತ್ತು ಸಂಗಡಿಗರಿಗೆ ದಂಡ ವಿಧಿಸಿ, ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಅನುವು ಮಾಡಿಕೊಳ್ಳಲು ಅವರ ಶಿಕ್ಷೆಯನ್ನು ಅಕ್ಟೋಬರ್ 17ರವರೆಗೆ ಅಮಾನತುಗೊಳಿಸಿದ್ದಾರೆ.

- Advertisement -

ಗುಜರಾತ್ ವಿಶ್ವವಿದ್ಯಾಲಯದ ಕಾನೂನು ವಿಭಾಗದ ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಡಾ. ಬಿ.ಆರ್ ಅಂಬೇಡ್ಕರ್ ಹೆಸರಿಡಬೇಕು ಎಂದು ಒತ್ತಾಯಿಸಿ ರಸ್ತೆ ತಡೆ ನಡೆಸಿದ ಮೇವಾನಿ ಮತ್ತು ಇತರ 19 ಜನರ ವಿರುದ್ಧ 2016ರಲ್ಲಿ ಐಪಿಸಿ ಸೆಕ್ಷನ್ 143, 147 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಅಲ್ಲದೆ ಈ ಪ್ರಕರಣದ ಓರ್ವ ಆರೋಪಿ ವಿಚಾರಣೆಯ ವೇಳೆ ಸಾವನ್ನಪ್ಪಿದ್ದನು.

Join Whatsapp