ಜಿದ್ದಾ: ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಆಹಾರ ಮೇಳ, ಸಿಹಿತಿಂಡಿ ಪಾಕ ಸ್ಪರ್ಧೆ

Prasthutha|

ಸಾಧಕರಿಗೆ ಸಮುದಾಯ ಸೇವಾ ಪ್ರಶಸ್ತಿ ಪ್ರದಾನ

- Advertisement -

ಜಿದ್ದಾ: ಭಾರತದ 75 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಚರಿಸಿಕೊಂಡು ಬರುತ್ತಿರುವ “ಆಜಾದಿ ಕಾ ಅಮೃತ್ ಮಹೋತ್ಸವ” ಭಾಗವಾಗಿ ಇಂಡಿಯಾ ಫ್ರಟರ್ನಿಟಿ ಫೋರಮ್, ಪಶ್ಚಿಮ ವಲಯದ ವತಿಯಿಂದ ಜಿದ್ದಾದಲ್ಲಿರುವ ಇಂಡಿಯನ್ ಕಾನ್ಸುಲೇಟ್ ಸಹಭಾಗಿತ್ವದೊಂದಿಗೆ “ಫ್ಲೇವರ್ಸ್ ಆಫ್ ಇಂಡಿಯಾ” ಎಂಬ ಶೀರ್ಷಿಕೆಯೊಂದಿಗೆ ಕಾನ್ಸುಲೇಟ್ ವಠಾರದಲ್ಲಿ ಆಹಾರ ಮೇಳ ಮತ್ತು ಮಹಿಳೆಯರಿಗಾಗಿ ಸಿಹಿತಿಂಡಿ ಪಾಕ ಸ್ಪರ್ಧೆಯನ್ನು ಆಯೋಜಿಸಿತ್ತು.

ಮನಮೋಹಕವಾಗಿ ಕಾಣುವ ದೆಹಲಿಯ ಕೆಂಪು ಕೋಟೆಯ ಮಾದರಿಯ ಪ್ರವೇಶ ದ್ವಾರ ಹಾಗೂ ತಾಜ್ ಮಹಲ್ ರೂಪದ ಕಾರ್ಯಕ್ರಮದ ಸ್ಟೇಜ್ ವೈಶಿಷ್ಟದೊಂಡಿಗೆ ಕೂಡಿದ್ದು, ಸಂದರ್ಶಕರ ಮನ ಸೆಳೆದಿತ್ತು. ಕೋವಿಡ್ ಭೀತಿಯಿಂದ ಮುಕ್ತರಾಗಿ ಬರುತ್ತಿರುವ ಪ್ರವಾಸಿಗಳ ಮುಖದಲ್ಲಿ  ಈ ಸಂಗಮವು ವಿಶೇಷ ಹುರುಪಿನೊಂದಿಗೆ ಭಾಗವಹಿಸಿದ ದೃಶ್ಯವು ಎಲ್ಲರನ್ನೂ ಸೆಳೆಯುವಂತಿತ್ತು..

- Advertisement -

ಆಹಾರ ಮೇಳವು ಎಲ್ಲಾ ರಾಜ್ಯಗಳ ವಿವಿಧ ರೀತಿಯ ವಿಭಿನ್ನ ಅಭಿರುಚಿಗಳನ್ನು ಒಳಗೊಂಡಿತ್ತು, ಭಾರತೀಯ ಆಹಾರ ಉತ್ಪನ್ನಗಳ ಪ್ರದರ್ಶನ ಸ್ಟಾಲ್ ಗಳು, ಸಿಹಿತಿಂಡಿ ಸ್ಪರ್ಧೆಗಳು ಹಾಗೂ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಲವು ಗಣ್ಯರನ್ನು ಇದೇ ಸಂದರ್ಭದಲ್ಲಿ “ಸಮುದಾಯ ಸೇವಾ ಪ್ರಶಸ್ತಿ” ಯೊಂದಿಗೆ ಗೌರವಿಸಲಾಯಿತು.

ಮೈಸೂರ್ ಅರಮನೆಯ ರೂಪದ ಸ್ಟಾಲ್ ಗಳಲ್ಲಿ ಕರ್ನಾಟಕದ ವಿವಿಧ ಭಾಗದ ಆಹಾರ ಪದಾರ್ಥಗಳನ್ನು ಪ್ರದರ್ಶಿಸಲಾಗಿತ್ತು. ಯುನಿಲಿವೆರ್, ಲುಲು, ಈಸ್ಟರ್ನ್ ಗ್ರೂಪ್, ಗ್ರೀನ್ ಲ್ಯಾಂಡ್ ಹೋಟೆಲ್, ಬಿರಿಯಾನಿ ಗೇಟ್, ಬಾಫ್ಕೋ, ಪೆಟ್ರೊನಾಸ್, ಹಿಮಾಲಯ, ಪ್ರೀಮಿಯರ್, ಅಜ್ವಾ ಮುಂತಾದ ಸಂಸ್ಥೆಗಳು ತಮ್ಮ ಉತ್ಪನ್ನಗಳ ಪ್ರದರ್ಶನ ಸ್ಟಾಲ್ ಗಳನ್ನಿಟ್ಟಿದ್ದರು.

ಕಾನ್ಸುಲ್ ಜನರಲ್ ಮುಹಮ್ಮದ್ ಶಾಹಿದ್ ಆಲಂ ಅವರು ಆಹಾರ ಮೇಳ ಹಾಗೂ ಸಾಂಸ್ಕೃತಿಕ ಸಭೆಯನ್ನು ಉದ್ಘಾಟಿಸಿದರು. ಉಪ ಕಾನ್ಸುಲ್ ಜನರಲ್ ವೈ. ಸಬೀರ್, ಹಮ್ನಾ ಮರಿಯಮ್ (ಕಾಮರ್ಸ್ ಮತ್ತು ಎಚ್‌ಒಸಿ), ವೈಸ್ ಕಾನ್ಸುಲ್ ಮಾಲತಿ ಗುಪ್ತಾ (ಆಡಳಿತ ಮತ್ತು ಶಿಕ್ಷಣ), ಹ್ಯಾಂಗ್‌ ಶಿಂಗ್ (ಕನ್ಸಲ್ ಎಕನಾಮಿಕ್ಸ್), ಮಕ್ಕಾ ಮರಕಜ್ ಅಲ್ ಅಹ್ಯಾ ಹಜ್ ತರಬೇತುದಾರ ಮುಹಮ್ಮದ್ ಸಿದ್ದಿಕಿ ಮತ್ತು ಮುಹಮ್ಮದ್ ಫಯಾಜ್ ಚೆನ್ನೈ (ಅದ್ಯಕ್ಷರು ಇಂಡಿಯನ್ ಫ್ರೆಟರ್ನಿಟಿ ಫಾರಂ ಪಶ್ಚಿಮ ವಲಯ) ಮತ್ತು ಇತರ ಗಣ್ಯರು  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಂದರ್ಶಕರು ಭಾರತೀಯ ಆಹಾರ  ಮೇಳದಲ್ಲಿ ಸಂಪೂರ್ಣವಾಗಿ ಭಾಗವಹಿಸಿ ಮೇಳದ ಯಶಸ್ಸಿಗೆ ಸಹಕರಿಸಿದರು.

ಭಾರತದ ವಿವಿಧ ರಾಜ್ಯಗಳ ಪ್ರಮುಖ ಸಾಮಾಜಿಕ, ಸಾಂಸ್ಕೃತಿಕ, ಕೈಗಾರಿಕಾ ಮತ್ತು ಮಾಧ್ಯಮದ ವ್ಯಕ್ತಿಗಳು ಸಮಾರಂಭದಲ್ಲಿ ಹಾಜರಿದ್ದರು.

Join Whatsapp