ಸಂವಿಧಾನದ 10ನೇ ವಿಧಿ ಉಲ್ಲಂಘಿಸಿದವರ ವಿರುದ್ಧ ಕೋರ್ಟಿಗೆ ಹೋಗಲು ಜೆಡಿಯು ತೀರ್ಮಾನ

Prasthutha|

ಪಾಟ್ನ: ಮಣಿಪುರದಲ್ಲಿ ನಿನ್ನೆ ತಡ ರಾತ್ರಿ ಐವರು ಜೆಡಿಯು ಶಾಸಕರು ಬಿಜೆಪಿ ಸೇರುವ ಮೂಲಕ ಸಂವಿಧಾನದ 10ನೇ ವಿಧಿಗೆ ಅಪಚಾರವೆಸಗಿದ್ದಾರೆ. ಇವರ ವಿರುದ್ಧ ಉಚ್ಚ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ರಾಜ್ಯ ಜೆಡಿಯು ತಿಳಿಸಿದೆ.

- Advertisement -

ಐವರು ಶಾಸಕರು ಪಾಟ್ನಾಕ್ಕೆ ಹೋಗಿದ್ದಾರೆ ಎಂದು ಜೆಡಿಯು ಅಧ್ಯಕ್ಷರು ತಿಳಿಸಿದರೆ, ಸ್ಥಳೀಯ ವರದಿಯಂತೆ ಆ ಐವರು ಜೆಡಿಯು ಶಾಸಕರನ್ನು ಮಣಿಪುರದ ಬಿಜೆಪಿ ಅಧ್ಯಕ್ಷ ಎ. ಶಾರ್ದಾ ದಿಲ್ಲಿಗೆ ಕರೆದೊಯ್ದಿದ್ದಾರೆ ಎಂದು ವರದಿಯಾಗಿದೆ. ಬಿಜೆಪಿ ನಾಯಕ ಮುಖ್ಯಮಂತ್ರಿ ಈ ಮೊದಲೇ ದಿಲ್ಲಿ ಸೇರಿದ್ದಾರೆ. 

ಒಂದು ಪಕ್ಷ ಇನ್ನೊಂದು ಪಕ್ಷದಲ್ಲಿ ಸೇರಲು ಸಂವಿಧಾನದ 10ನೇ ವಿಧಿಯನ್ನು ಅನುಸರಿಸಬೇಕಾಗುತ್ತದೆ.

- Advertisement -

ರಾಜ್ಯ ಬಿಜೆಪಿ ಅಧ್ಯಕ್ಷ ಕ್ಷ(ತ್ರಿಮಯುಂ) ಬೀರೇನ್ ಅವರು ಪಾಟ್ನಾಕ್ಕೆ ಹೋಗುವುದಾಗಿ ಹೇಳಿದ್ದ ಶಾಸಕರು ದಿಲ್ಲಿಗೆ ಹಾರಿರುವುದು ತಿಳಿದು ಬಂದಿದೆ. ಇದು ಸಂವಿಧಾನದ 10ನೇ ವಿಧಿಗೆ ಅಪಚಾರವಾಗಿದ್ದು, ತಾನು ಹೈಕೋರ್ಟ್ ಮೆಟ್ಟಿಲೇರುವುದಾಗಿ ಅವರು ಹೇಳಿದ್ದಾರೆ. ಅಲ್ಲಿ ಆ ಐವರು ಶಾಸಕರನ್ನು ಅನರ್ಹಗೊಳಿಸಲು ಕೇಳುವುದಾಗಿ ಅವರು ಹೇಳಿದ್ದಾರೆ. ಮುಹ್ಮದ್ ಅಬ್ದುಲ್ ನಸೀರ್ ಒಬ್ಬರು ಮಾತ್ರ ಜೆಡಿಯುನಲ್ಲಿ ಉಳಿಯುತ್ತಾರೆ, ಎನ್ನುವಾಗಲೇ ಅವರೂ ದಿಲ್ಲಿಗೆ ಹೋಗಿದ್ದಾರೆ ಎನ್ನುವ ವರದಿ ಬಂದಿದೆ.

ಪಾಟ್ನಾದಲ್ಲಿ ನಡೆಯುತ್ತಿರುವ ಜೆಡಿಯು ಕಾರ್ಯಕಾರಿ ಸಮಾವೇಶದಲ್ಲಿ ಮಣಿಪುರದ ಬಿಜೆಪಿ ಮೈತ್ರಿ ಸರಕಾರದಿಂದ ಹೊರಬರುವಂತೆ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಮಣಿಪುರ ಬಿಜೆಪಿ ಶಾಸಕರು ತಪ್ಪಿಸಿಕೊಂಡಿದ್ದಾರೆ ಎನ್ನುವುದು ಈಗ ಸ್ಪಷ್ಟವಾಗಿದೆ.

ಕಳೆದ ಚುನಾವಣೆಯಲ್ಲಿ 38 ಕಡೆ ಸ್ಪರ್ಧಿಸಿದ್ದ ಜೆಡಿಯು 6 ಕಡೆ ಗೆದ್ದಿತ್ತು. ಕಾಂಗ್ರೆಸ್ಸಿನ ಎಲ್ಲರೂ ಬಿಜೆಪಿಗೆ ಪಕ್ಷಾಂತರಗೊಂಡು ಸ್ಪರ್ಧಿಸಿದ್ದರಿಂದ ಕಾಂಗ್ರೆಸ್ ಬರೇ 5 ಸ್ಥಾನ ಉಳಿಸಿಕೊಳ್ಳಲು ಸಾಧ್ಯವಾಗಿತ್ತು. ಬಿಜೆಪಿಯು 60 ಸ್ಥಾನ ಬಲದಲ್ಲಿ 32 ಗೆದ್ದಿತ್ತು; ಬಹುಪಾಲು ಅವರೆಲ್ಲ ಕಾಂಗ್ರೆಸ್ ಮಾಜಿ ಶಾಸಕರಾಗಿದ್ದರು.

Join Whatsapp