ಜೆಡಿ(ಎಸ್​)ನಲ್ಲಿ ಈಗ ರಾಜಿನಾಮೆ ಪರ್ವ: ಸಾಮೂಹಿಕವಾಗಿ ಪಕ್ಷ ತೊರೆಯಲು ತೀರ್ಮಾನಿಸಿದ ಮುಸ್ಲಿಂ ನಾಯಕರು

Prasthutha|

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ.

- Advertisement -

ಹೀಗಾಗಿ ಜೆಡಿಎಸ್​ನ ಅಲ್ಪಸಂಖ್ಯಾತ ನಾಯಕರು ಪಕ್ಷ ತೊರೆಯಲು ತೀರ್ಮಾನಿಸಿದ್ದಾರೆ. ಬೆಂಗಳೂರಿನ ಕೆ.ಕೆ ಗೆಸ್ಟ್ ಹೌಸನಲ್ಲಿ ಇಂದು (ಸೆ.24) ನಡೆದ ಜೆಡಿಎಸ್ ಅಲ್ಪಸಂಖ್ಯಾತ ನಾಯಕರ ಸಭೆ ಅಂತ್ಯವಾಗಿದ್ದು, ಮುಸ್ಲಿಂ ಮುಖಂಡರು ಜೆಡಿಎಸ್​ಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.

ಜೆಡಿಎಸ್ ಕಾರ್ಯಾಧ್ಯಕ್ಷ ಎನ್ ಎಂ ನಬಿ, ಮುಖಂಡರಾದ ಮೋಹಿದ್ ಅಲ್ತಾಫ್, ನಾಸೀರ್ ಉಸ್ತಾದ್, ವಕ್ತಾರ ನೂರ್ ಅಹಮ್ಮದ್ ಸೇರಿದಂತೆ ದಾವಣಗೆರೆ, ಮೈಸೂರು, ರಾಮನಗರ, ರಾಯಚೂರು, ತುಮಕೂರು ನಾಯಕರು ಸಭೆಯಲ್ಲಿ ಉಪಸ್ಥಿತರಿದ್ದು, ರಾಜ್ಯದಲ್ಲಿ ಪ್ರವಾಸ ಮಾಡಿ ಸಾಮೂಹಿಕ ರಾಜೀನಾಮೆ ನೀಡಲು ನಿರ್ಣಯಿಸಿದ್ದಾರೆ.

- Advertisement -

ಬಿಜೆಪಿ ಜೊತೆ ಜೆಡಿಎಸ್​​ ಮೈತ್ರಿ ಮಾಡಿಕೊಂಡ ಬೆನ್ನಲ್ಲೇ ದಳದಿಂದ ದೂರ ಉಳಿಯಲು ಮುಸ್ಲಿಂ ಮುಖಂಡರು ನಿರ್ಧರಿಸಿದ್ದಾರೆ.

ಬಿಜೆಪಿ ಜೊತೆ​​ ಮೈತ್ರಿ ಮಾಡಿಕೊಂಡ ಬೆನ್ನಲ್ಲೇ ಜೆಡಿಎಸ್ ರಾಜ್ಯ ಉಪಾಧ್ಯಕ್ಷ, ರಾಜ್ಯ ಕಚೇರಿ ಉಸ್ತುವಾರಿ ಸೈಯದ್ ಶಫಿಉಲ್ಲ ಸಾಹೇಬ್ ತಮ್ಮ ಹುದ್ದೆಗೆ ಈಗಾಗಲೇ ರಾಜಿನಾಮೆ ನೀಡಿದ್ದಾರೆ. ಇನ್ನುಳಿದಂತೆ ಮುಂದಿನ ದಿನಗಳಲ್ಲಿ ಎಲ್ಲಾ ಮುಸ್ಲಿಂ ನಾಯಕರು ಜೆಡಿಎಸ್​ಗೆ ಗುಡ್​ಬೈ ಹೇಳಲಿದ್ದಾರೆ ಎಂದು ತಿಳಿದುಬಂದಿದೆ.



Join Whatsapp