ಕಳೆದ ಬಾರಿ ಜೆಡಿಎಸ್‌ ಮೈತ್ರಿಯಿಂದ ನಮಗೆ ಕಹಿ ಅನುಭವವಾಗಿದೆ: ದಿನೇಶ್‌ ಗುಂಡೂರಾವ್‌

Prasthutha|

- Advertisement -

ರಾಮನಗರ: ಬಿಜೆಪಿ ಜೊತೆಗಿನ ಮೈತ್ರಿಯೊಂದಿಗೆ ಜೆಡಿಎಸ್ ತನ್ನ ಕೊನೆಯ ಹಂತ ತಲುಪಿದೆ ಎಂದು‌ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಹಿಂದೆ ಮೈತ್ರಿ ಮಾಡಿ ಅನುಭವಿಸಿದ್ದೆವೆ. ನಮಗೆ ಆ ಮೈತ್ರಿ ಬೇಡ. ಹೊಸದಾಗಿ‌ ಮೈತ್ರಿ ಮಾಡಿಕೊಂಡವರು ಅನುಭವ ಮಾಡಿಕೊಳ್ಳಲಿ ಎಂದು ಬಿಜೆಪಿಗೆ ತಿರುಗೇಟು ನೀಡಿದರು.

- Advertisement -

ಕಳೆದ ಬಾರಿ ಮೈತ್ರಿಯಿಂದ ನಮಗೆ ಕಹಿ ಅನುಭವವಾಗಿದೆ. ಈ ಬಾರಿ 28 ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆಮಾಡಲಿದ್ದಾರೆ. ನಮ್ಮ ಜೊತೆ ಬರುವ ಇತರೆ ಪಕ್ಷಗಳಿಗೆ ಸ್ವಾಗತ. ಮೈತ್ರಿಯಿಂದ ನಮಗೆ ಯಾವುದೇ ಆತಂಕ ಗೊಂದಲ ಇಲ್ಲ ಎಂದು ಹೇಳಿದರು.

Join Whatsapp