ಮಾಡಾಳ್ ಲಂಚ ಪ್ರಕರಣದಲ್ಲಿ ಬಿಜೆಪಿಗೆ ಮುಜುಗರ: ಸಚಿವ ಮಾಧುಸ್ವಾಮಿ

Prasthutha|

ಬೆಂಗಳೂರು: ಲಂಚ ಪ್ರಕರಣದಲ್ಲಿ ಸಿಲುಕಿರುವ ಕೆಎಸ್’ಡಿಎಲ್ ಮಾಜಿ ಅಧ್ಯಕ್ಷ, ಆಡಳಿತ ಪಕ್ಷದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪ್ರಕರಣದಿಂದ ಸರ್ಕಾರಕ್ಕೆ, ಪಕ್ಷಕ್ಕೆ ಮುಜುಗರ ಉಂಟಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧು ಸ್ವಾಮಿ ಹೇಳಿದ್ದಾರೆ.

- Advertisement -

ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಸಾಗರ ಎಲ್ಲೋ ಒಂದು ಕಡೆ ಏನೋ ಆಗಿರುತ್ತದೆ. ಹೌದು ಲೋಕಾಯಕ್ತ ದಾಳಿ  ಮುಜುಗರದ ವಿಚಾರ ಎಂದರು.

ಮಾಡಾಳ್ ಬಂಧನ ವಿಚಾರದಲ್ಲಿ ಗೊಂದಲ ಉಂಟಾಗಿಲ್ಲ. ಲೋಕಾಯುಕ್ತ ಪೊಲೀಸರು ಮತ್ತು ರಾಜ್ಯ ಪೊಲೀಸರು ಬೇರೆ ಬೇರೆ. ಬಂಧಿಸದೇ ಇರುವುದು ಲೋಕಾಯುಕ್ತ ಪೊಲೀಸರ ತಪ್ಪು. ನಾವು ಲೋಕಾಯುಕ್ತ ಪೊಲೀಸರಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದರು.

- Advertisement -

ಮಾಡಾಳ್ ಪುತ್ರನನ್ನು ಹುದ್ದೆಯಿಂದ ಅಮಾನತು ಮಾಡದ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮಾಧುಸ್ವಾಮಿ, ಲೋಕಾಯುಕ್ತರು ಅಮಾನತಿಗೆ ಶಿಫಾರಸು ಮಾಡಿದರೆ ಅಥವಾ 48 ಗಂಟೆಗೂ ಹೆಚ್ಚು ಬಂಧನದಲ್ಲಿದ್ದರೆ ಸರ್ಕಾರ ಮಾಡಾಳ್ ಮಗನನ್ನು ಅಮಾನತು ಮಾಡಬಹುದು ಎಂದರು.

ಲೋಕಾಯುಕ್ತದಿಂದ ವಕೀಲರ ನೇಮಕ ಸರ್ಕಾರಕ್ಕೆ ಸಂಬಂಧಿಸಿದ್ದಲ್ಲ. ಇದು ಲೋಕಾಯುಕ್ತ ನ್ಯಾಯಮೂರ್ತಿಗಳ ಅಧೀನದಲ್ಲಿದ್ದು, ಈ ಪ್ರಕರಣದಲ್ಲಿ ನಾವು ಹೇಗೆ ಪ್ರತಿಕ್ರಿಯೆ ಕೊಡಲು ಆಗುತ್ತದೆ. ಲೋಕಾಯುಕ್ತರಿಗೆ ಸರ್ಕಾರ ಆದೇಶ ಮಾಡಲು ಆಗುವುದಿಲ್ಲ. ಅದು ಸ್ವಾಯತ್ತ ಸಂಸ್ಥೆ ಎಂದು ಹೇಳಿದರು

Join Whatsapp