ದೇಶದ ಕೋವಿಡ್ ಲಸಿಕೆ ನೀತಿ ಒಕ್ಕೂಟ ವ್ಯವಸ್ಥೆಗೆ ವಿರುದ್ಧ : ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್

Prasthutha|

ರಾಂಚಿ: ದೇಶದ ಕೋವಿಡ್ ಲಸಿಕೆ ನೀತಿ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಹೇಳಿದ್ದಾರೆ. ಕೋವಿಡ್ ಮಹಾಮಾರಿ ಹರಡುತ್ತಿರುವ ಈ ಸಮಯದಲ್ಲಿ ಆಯಾ ರಾಜ್ಯಗಳು ಲಸಿಕೆಗಳನ್ನು ತಾವೇ ಕಂಡುಕೊಳ್ಳಬೇಕೆಂಬ ನೀತಿಯು ಸಹಕಾರಿ ಒಕ್ಕೂಟ ವ್ಯವಸ್ಥೆಯ ನಿರಾಕರಣೆಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಈ ಕುರಿತು ಪ್ರಧಾನಿ ಮೋದಿಗೆ ಪತ್ರ ಬರೆದ ಅವರು, ರಾಜ್ಯಗಳ ಎಲ್ಲಾ ಮುಂಚೂಣಿ ಯೋಧರಿಗೆ ಉಚಿತ ಲಸಿಕೆ ನೀಡಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಬೇಕು ಎಂದು ಒತ್ತಾಯಿಸಿದರು. ಪಲ್ಸ್ ಪೋಲಿಯೋ ಸೇರಿದಂತೆ ಇತರ ಎಲ್ಲಾ ರೋಗಗಳಿಗೆ ಜಾರ್ಖಂಡ್ ಮಾತ್ರವಲ್ಲದೆ ದೇಶದ ಎಲ್ಲಾ ರಾಜ್ಯಗಳಿಗೆ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ಈ ಬಾರಿ, ಕೋವಿಡ್ ಲಸಿಕೆಯನ್ನು ಸ್ವತಃ ಖರೀದಿಸಬೇಕೆಂದು ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಸೂಚಿಸಿದೆ. ಸ್ವತಂತ್ರ ಭಾರತದಲ್ಲಿ ಇಂತಹ ಪರಿಸ್ಥಿತಿ ಉಂಟಾಗಿರುವುದು ಇದೇ ಮೊದಲು. ಇಡೀ ದೇಶವೇ ಕೋವಿಡ್ ಮಹಾಮಾರಿಯ ವಿರುದ್ಧ ಹೋರಾಡುತ್ತಿದೆ ಎಂದು ಅವರು ಹೇಳಿದ್ದಾರೆ. ಕೋವಿಡ್ ನಿಯಂತ್ರಣಕ್ಕಾಗಿ ಜಾರ್ಖಂಡ್ ಗೆ 1,100 ಕೋಟಿ ರೂ. ಬೇಕಾಗಿದೆ. ರಾಜ್ಯದಲ್ಲಿ 1.57 ಕೋಟಿ ಫಲಾನುಭವಿಗಳಿದ್ದಾರೆ.

ಇನ್ನೂ 12-18 ವಯಸ್ಸಿನ ಮಕ್ಕಳನ್ನು ಲಸಿಕೆ ನಿಡುವ ಪಟ್ಟಿಯಲ್ಲಿ ಸೇರಿಸಿದರೆ ಇನ್ನೂ 1,000 ಕೋಟಿ ಬೇಕಾಗಬಹುದು ಎಂದು ಸೊರೇನ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.



Join Whatsapp