ಕೋವಿಡ್ ನಿಯಮ ಉಲ್ಲಂಘಿಸಿ ಮಗಳ ಮದುವೆಯಲ್ಲಿ ಡ್ಯಾನ್ಸ್; ಬಿಜೆಪಿ ಶಾಸಕನ ವಿರುದ್ಧ ಎಫ್ಐಆರ್

Prasthutha|

ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ನೂರಾರು ಜನರನ್ನು ಸೇರಿಸಿ ತನ್ನ ಪುತ್ರಿಯ ಮದುವೆ ನಡೆಸಿದ ಮಹಾರಾಷ್ಟ್ರದ ಬಿಜೆಪಿ ಶಾಸಕ ಮಹೇಶ್ ಲಾಂಗ್ಡೆ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಪಿಂಪ್ರಿ-ಚಿಂಚ್ ವಾಡದ ಬಿಜೆಪಿ ಶಾಸಕ ಮಹೇಶ್ ಲಾಂಗ್ಡೆ ಹಾಗೂ ಇತರ 60 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

45 ವರ್ಷ ವಯಸ್ಸಿನ ಶಾಸಕ ಮಹೇಶ್ ಅವರು ಕುಟುಂಬ ಮತ್ತು ಸ್ನೇಹಿತರೊಂದಿಗೆ ವಿವಾಹ ಪೂರ್ವದ ಕಾರ್ಯಕ್ರಮವೊಂದರಲ್ಲಿ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಮದುವೆಗೆ 25 ಮಂದಿ ಮಾತ್ರ ಸೇರಲು ಅನುಮತಿ ಇದೆ.

- Advertisement -

ನೂರಾರು ಜನರು ಸಾಮಾಜಿಕ ಅಂತರ ಪಾಲಿಸದೆ, ಮಾಸ್ಕ್ ಧರಿಸದೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಾತ್ರವಲ್ಲ ಜಿಲ್ಲಾಡಳಿತದ ಪೂರ್ವಾನುಮತಿ ಪಡೆಯದೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಿಂಪ್ರಿ-ಚಿಂಚ್ವಾಡ್ ರಾಜ್ಯ ರಾಜಧಾನಿ ಮುಂಬಯಿಯಿಂದ 130 ಕಿ.ಮೀ ದೂರದಲ್ಲಿದೆ.

- Advertisement -