ಅರಮನೆ ತ್ಯಜಿಸಿ ಸಾಮಾನ್ಯ ಪ್ರಜೆಯೊಡನೆ ವಿವಾಹವಾದ ರಾಜಕುಮಾರಿ..!

Prasthutha|

ಟೋಕಿಯೋ : ಜಪಾನ್ ’ನ ಚಕ್ರವರ್ತಿ ನರುಹಿಟೊ ಅವರ ಸೊಸೆ, ರಾಜ ಅಕಿಶಿನೊರ ಸುಪುತ್ರಿ, ರಾಜಕುಮಾರಿ ಮಾಕೊ, ಓರ್ವ ಸಾಮಾನ್ಯ ವ್ಯಕ್ತಿಯನ್ನು ಮದುವೆಯಾಗುವ ಮೂಲಕ ಸುದ್ದಿಯಾಗಿದ್ದಾರೆ. ಅಷ್ಟೇ ಅಲ್ಲ ಇದೇ ಕಾರಣಕ್ಕಾಗಿ ಮಾಕೊ ರಾಜಮನೆತನದ ಎಲ್ಲಾ ಸ್ಥಾನಮಾನಗಳನ್ನು ಕಳೆದುಕೊಂಡಿದ್ದಾರೆ.

- Advertisement -


30ರ ಹರೆಯದ ರಾಜಕುಮಾರಿ ಮಾಕೊ, ಟೋಕಿಯೋದ ಕ್ರಿಸ್ಚಿಯನ್ ವಿಶ್ವವಿದ್ಯಾಲಯದಲ್ಲಿ ತನ್ನ ಸಹಪಾಠಿಯಾದ ಕೀ ಕೊಮರೊರನ್ನು ವರಿಸಿದ್ದಾರೆ. ಸಾಮನ್ಯ ವ್ಯಕ್ತಿಯನ್ನು ಮದುವೆಯಾದರೆ ಅರಮನೆಯಿಂದ ಸಿಗುವ 12.3 ಲಕ್ಷ ಡಾಲರ್ ಹಣವನ್ನು ಮಾಕೊ ತಿರಸ್ಕರಿಸಿರುವುದು ವಿಶೇಷ. ವಿವಾಹದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಕೊ, ನನ್ನ ಅಮೂಲ್ಯ ಜೀವನವನ್ನು ನನ್ನ ಏಕೈಕ ಪ್ರಿಯತಮನ ಜೊತೆ ಕಳೆಯಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.


ತೆಳುನೀಲಿ ಬಟ್ಟೆ ಧರಿಸಿ ಹೂಗುಚ್ಛ ಹಿಡಿದು ಮಾಕೊ ಮಂಗಳವಾರ ಅರಮನೆಯಿಂದ ನಿರ್ಗಮಿಸಿದರು. ಮಾಕೊ ಹಾಗೂ ಕೀ ಕೊಮುರೊ ಅವರ ವಿವಾಹವಾದ ದಾಖಲೆಗಳನ್ನು ಇಂಪೀರಿಯಲ್ ಹೌಸ್ ’ಹೋಲ್ಡ್ ಏಜನ್ಸಿಯ ಅಧಿಕಾರಿಯೊಬ್ಬರು ಸ್ಥಳೀಯ ರಿಜಿಸ್ಟ್ರಾರ್ ಕಚೇರಿಗೆ ಸಲ್ಲಿಸಿದ್ದಾರೆ. ರಾಜಮನೆತನದ ಕಾನೂನಿನ ಪ್ರಕಾರ ಪುರುಷ ಉತ್ತರಾಧಿಕಾರಿಗೆ ಮಾತ್ರ ಅವಕಾಶವಿದ್ದು, ಸಾಮಾನ್ಯರನ್ನು ವಿವಾಹವಾಗುವವರು ರಾಜಮನೆತನದ ಸ್ಥಾನಮಾನಗಳನ್ನು ತ್ಯಜಿಸಬೇಕಾಗುತ್ತದೆ. 2017ರಲ್ಲೇ ಇವರಿಬ್ಬರ ವಿವಾಹ ಘೋಷಣೆಯಾಗಿತ್ತು. ಆದರೆ ಮಾಧ್ಯಮಗಳ ವಿಪರೀತ ಕಪೋಲ ಕಲ್ಪಿತ ವರದಿಗಳು ಹಾಗೂ ಹಣಕಾಸಿನ ವಿಚಾರದಲ್ಲಿ ಉಂಟಾಗಿದ್ದ ಕೆಲವೊಂದು ಭಿನ್ನಾಭಿಪ್ರಾಯಗಳಿಂದ ವಿವಾಹವು ಮುಂದೂಡಲ್ಪಟ್ಟಿತ್ತು.

Join Whatsapp