ಜಪಾನ್ ಭೂಕಂಪ: ಮೃತರ ಸಂಖ್ಯೆ 57ಕ್ಕೆ ಏರಿಕೆ

Prasthutha|

ಟೋಕಿಯೋ: ಜಪಾನ್‌ನಲ್ಲಿ ಸರಣಿ ಪ್ರಬಲ ಭೂಕಂಪಗಳಿಂದ ಸಾವನ್ನಪ್ಪಿದವರ ಸಂಖ್ಯೆ ಈಗ 57 ಕ್ಕೆ ಏರಿದೆ ಎಂದು ಇಶಿಕಾವಾ ಪ್ರಾಂತ್ಯದ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿದೆ. ನೋಟೋ ಪರ್ಯಾಯ ದ್ವೀಪದ ವಾಜಿಮಾ ಮತ್ತು ಸುಜುನಲ್ಲಿ ಹೆಚ್ಚಿನ ಸಾವುನೋವುಗಳು ದೃಢಪಟ್ಟಿವೆ.

- Advertisement -

ಇಶಿಕಾವಾ ಕೇಂದ್ರ ಪ್ರಾಂತ್ಯದ ನೊಟೊ ಪರ್ಯಾಯ ದ್ವೀಪದಲ್ಲಿ ಸೋಮವಾರ ಭೂಕಂಪ ಸಂಭವಿಸಿದ್ದು, ಕಟ್ಟಡಗಳು ಕುಸಿದಿವೆ ಮತ್ತು ಸುನಾಮಿ ಎಚ್ಚರಿಕೆಗಳನ್ನು ಪೂರ್ವ ರಷ್ಯಾದವರೆಗೆ ಕಳುಹಿಸಲಾಗಿದೆ. ದೇಶದ ಹವಾಮಾನ ಕಚೇರಿಯ ಪ್ರಕಾರ, ದಿನ ದೇಶದಲ್ಲಿ ಒಟ್ಟು 155 ಭೂಕಂಪಗಳು ವರದಿಯಾಗಿವೆ ಎಂದು ವರದಿಯಾಗಿದೆ.

- Advertisement -

Join Whatsapp