ಅಸ್ಸಾಂನಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ: 12 ಮಂದಿ ಮೃತ್ಯು

Prasthutha|

ಅಸ್ಸಾಂ: ಗೋಲಾಘಾಟ್ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 12 ಮಂದಿ ಸಾವನ್ನಪ್ಪಿದ್ದಾರೆ.

- Advertisement -

ಪ್ರಯಾಣಿಕರು ತುಂಬಿದ್ದ ಬಸ್ ಗೋಲಘಾಟ್ ಜಿಲ್ಲೆಯ ಕಮರ್ಬಂಧ ಪ್ರದೇಶದಿಂದ ತಿಲಿಂಗ ಮಂದಿರದ ಕಡೆಗೆ ಹೋಗುತ್ತಿರುವಾಗ ಬಲಿಜನ್ ಎಂಬ ಪ್ರದೇಶದಲ್ಲಿ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಟ್ರಕ್ ಜೋರ್ಹತ್ ಕಡೆಯಿಂದ ವಿರುದ್ಧ ದಿಕ್ಕಿನಲ್ಲಿ ಬರುತ್ತಿತ್ತು. ಮುಂಜಾನೆ 5 ಗಂಟೆಗೆ ಅಪಘಾತ ಸಂಭವಿಸಿದೆ ಎಂದು ಗೋಲಾಘಾಟ್ ಎಸ್ಪಿ ರಾಜೇನ್ ಸಿಂಗ್ ಹೇಳಿದ್ದಾರೆ.

ಘಟನಾ ಸ್ಥಳದಿಂದ 10 ಶವಗಳನ್ನು ಹೊರತೆಗೆಯಲಾಗಿದ್ದು, ದೆರ್ಗಾಂವ್ ಸಿಎಚ್ಸಿಗೆ ಕಳುಹಿಸಲಾಗಿದೆ. 27 ಗಾಯಾಳುಗಳನ್ನು ಜೋರ್ಹತ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ, ಈ ವೇಳೆ ಇಬ್ಬರು ವ್ಯಕ್ತಿಗಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆಂದು ತಿಳಿಸಿದ್ದಾರೆ. ಇದರಂತೆ ದುರ್ಘಟನೆಯಲ್ಲಿ 12 ಮಂದಿ ಸಾವನ್ನಪ್ಪಿದ್ದು, ಗಾಯಗೊಂಡಿರುವ 25 ಮಂದಿಯ ಪೈಕಿ ಹಲವರ ಸ್ಥಿತಿ ಗಂಭೀರವಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

Join Whatsapp