BCF ಇಫ್ತಾರ್’ನ ಅಧ್ಯಕ್ಷರಾಗಿ ಜನಾಬ್ ಅಬ್ದುಲ್ ಲತೀಫ್ ಮುಲ್ಕಿ ಆಯ್ಕೆ

Prasthutha|

ದುಬೈ: ಅನಿವಾಸಿ ಭಾರತೀಯರ ಪ್ರತಿಷ್ಠಿತ ಸಂಘಟನೆಯಾದ ಬ್ಯಾರೀಸ್ ಕಲ್ಚರಲ್ ಫೋರಮ್, ದುಬೈ, ಇದರ ವತಿಯಿಂದ ಕಳೆದ ಎರಡು ದಶಕಗಳಿಂದ ಪ್ರತೀ ವರ್ಷ ನಡೆಸಿಕೊಂಡು ಬರುತ್ತಿರುವ ಇಫ್ತಾರ್ ಕೂಟವು ಈ ವರ್ಷ ಏಪ್ರಿಲ್ ತಿಂಗಳ 1 ನೇ ತಾರೀಕಿನಂದು ( 01/04/2023 ) ದುಬೈ ಯಲ್ಲಿ ನಡೆಸುವುದೆಂದು ತೀರ್ಮಾನಿಸಲಾಗಿದೆ.

- Advertisement -


ಸರ್ವ ಧರ್ಮ ಸಮನ್ವಯ ಮತ್ತು ಸೌಹಾರ್ತೆಗೆ ಪ್ರಸಿದ್ಧವಾದ BCF ಇಫ್ತಾರಿನ ಅಧ್ಯಕ್ಷರಾಗಿ BCF ಉಪಾಧ್ಯಕ್ಷರಾದ ಜನಾಬ್ ಅಬ್ದುಲ್ ಲತೀಫ್ ಮುಲ್ಕಿಯವರನ್ನು ಆರಿಸಲಾಯಿತು ಎಂದು ಬಿಸಿಫ್ ಅಧ್ಯಕ್ಷರಾದ ಡಾ B K ಯೂಸುಫ್ ಮತ್ತು ಕಾರ್ಯಕಾರೀ ಸಮಿತಿಯ ಸದಸ್ಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Join Whatsapp