ದಮಾಮ್’ಗೆ ಹೊರಟಿದ್ದ ವಿಮಾನ ತುರ್ತು ಭೂಸ್ಪರ್ಶ: ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

Prasthutha|

ತಿರುವನಂತಪುರ: ಹೈಡ್ರಾಲಿಕ್ ವಿಫಲತೆಯ ಕಾರಣಕ್ಕೆ ದಮಾಮ್’ಗೆ ಹೊರಟಿದ್ದ ವಿಮಾನವನ್ನು ಹಿಂದಿರುಗಿಸಿ ಕೇರಳದ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಹಿನ್ನೆಲೆಯಲ್ಲಿ ಈ ನಿಲ್ದಾಣದಲ್ಲಿ ಸಂಪೂರ್ಣ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.

- Advertisement -


ಹೈಡ್ರಾಲಿಕ್ ವೈಫಲ್ಯ ಸಮಸ್ಯೆ ಕಂಡು ಬಂದ ಬಳಿಕ ವಿಮಾನವನ್ನು ಮಧ್ಯಾಹ್ನ 12.15ರ ಸುಮಾರಿಗೆ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ. ಇಳಿಯುವಾಗ 182 ಮಂದಿ ಪ್ರಯಾಣಿಕರಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ಐಎಕ್ಸ್ 385 ವಿಮಾನದ ಬಾಲದ ಭಾಗವು ರನ್ ವೇಗೆ ಉಜ್ಜಿದೆ. ಅದು ಮುಂಜಾನೆ ದಮ್ಮಮ್ ಗೆ ಹೊರಟಿತ್ತು ಎಂದು ತಿಳಿದುಬಂದಿದೆ.
ಬೆಂಕಿ ಹೊತ್ತಿಕೊಳ್ಳುವ ಅಪಾಯವಿದ್ದುದರಿಂದ, ಸುಲಭ ಲ್ಯಾಂಡಿಂಗಿಗೆ ವಿಮಾನವು ಇಂಧನವನ್ನು ಅರಬಿ ಕಡಲಿಗೆ ಸುರಿದ ಬಳಿಕ ವಿಮಾನ ನಿಲ್ದಾಣದಲ್ಲಿ ಇಳಿಯಿತು.


ಮುಂದಿನ ಹೇಳಿಕೆಯ ವರೆಗೆ ತಿರುವನಂತಪುರಂ ವಿಮಾನ ನಿಲ್ದಾಣವು ತುರ್ತು ಪರಿಸ್ಥಿತಿಯಲ್ಲಿ ಇರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Join Whatsapp