ಜಮ್ಮು ಕಾಶ್ಮೀರ: ಗೀಲಾನಿ ಮೊಮ್ಮಗ ಸರ್ಕಾರಿ ಕೆಲಸದಿಂದ ವಜಾ

Prasthutha|

ಶ್ರೀನಗರ: ಇತ್ತೀಚೆಗೆ ನಿಧನರಾದ ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗೀಲಾನಿ ಅವರ ಮೊಮ್ಮಗ ಅನೀಸ್ ಉಲ್ ಇಸ್ಲಾಮ್ ಅವರನ್ನು ಸರ್ಕಾರಿ ಹುದ್ದೆಯಿಂದ ವಜಾಗೊಳಿಸಲಾಗಿದೆ.

- Advertisement -

ಅನೀಸ್ ಉಲ್ ಇಸ್ಲಾಮ್ ಸರ್ಕಾರಿ ಸ್ವಾಮ್ಯದ ಕನ್ವೆನ್ಶನ್ ಕೇಂದ್ರದಲ್ಲಿ ಸಂಶೋಧನಾ ಅಧಿಕಾರಿ ಯಾಗಿ ಕೆಲಸ ಮಾಡುತ್ತಿದ್ದರು.


ಜಮ್ಮು-ಕಾಶ್ಮಿರದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಅವರು ನೆರವು ನೀಡುತ್ತಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಸರ್ಕಾರಿ ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಹೇಳಲಾಗಿದೆ.
ಇದೀಗ ಸಂವಿಧಾನದ ಕಲಂ 311 (2) (ಸಿ) ಅಡಿಯಲ್ಲಿ ಬರುವ ವಿಶೇಷ ನಿಬಂಧನೆಗಳ ಅನುಸಾರ ಅವರನ್ನು ವಜಾಗೊಳಿಸಲಾಗಿದೆ.

Join Whatsapp