ದೆಹಲಿ | ಪ್ರತ್ಯೇಕತಾವಾದಿ ನಾಯಕ ಅಲ್ತಾಫ್ ಶಾ ಜೈಲಿನಲ್ಲಿ ನಿಧನ

Prasthutha|

ನವದೆಹಲಿ: ಜೈಲಿನಲ್ಲಿದ್ದ ಪ್ರತ್ಯೇಕತಾವಾದಿ ಕಾಶ್ಮೀರಿ ನಾಯಕ ಅಲ್ತಾಫ್ ಅಹ್ಮದ್ ಷಾ ಅವರು ಮಂಗಳವಾರ ಮುಂಜಾನೆ ದೆಹಲಿಯ ಆಲ್ ಇಂಡಿಯಾ ಇನ್’ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ನಲ್ಲಿ ನಿಧನರಾಗಿದ್ದಾರೆ ಎಂದು ಅವರ ಪುತ್ರಿ, ಪತ್ರಕರ್ತೆ ರುವಾ ಷಾ ಖಚಿತಪಡಿಸಿದ್ದಾರೆ.

- Advertisement -

ಈ ಕುರಿತು ಟ್ವೀಟ್ ಮಾಡಿರುವ ರುವಾ, ನನ್ನ ತಂದೆ ಅಲ್ತಾಫ್ ಅವರು ನವದೆಹಲಿಯ ಏಮ್ಸ್’ನಲ್ಲಿ ಕೊನೆಯುಸಿರೆಳೆದಿದ್ದು, ರಾಜಕೀಯ ಖೈದಿಯಾಗಿರುವ ಮೃತರಿಗೆ ಪ್ರಾರ್ಥಿಸುವ ಇಸ್ಲಾಮಿಕ್ ಶ್ಲೋಕವನ್ನು ಪೋಸ್ಟ್ ಮಾಡಿದ್ದಾರೆ.

ಇತ್ತೀಚೆಗೆ ರುವಾ ಷಾ ಅವರು ತನ್ನ ತಂದೆಯ ಆರೋಗ್ಯ ಸ್ಥಿತಿಯ ಬಗ್ಗೆ ಭಾರತದ ಪ್ರಧಾನ ಮಂತ್ರಿ ಮತ್ತು ಇತರ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದಿದ್ದರು.

- Advertisement -

ನನ್ನ ತಂದೆ ಅಲ್ತಾಫ್ ಷಾ ಅವರಿಗೆ 66 ವರ್ಷವಾಗಿದ್ದು, ಕಳೆದ 5 ವರ್ಷಗಳಿಂದ ನವದೆಹಲಿಯ ತಿಹಾರ್ ಜೈಲಿನಲ್ಲಿ ರಾಜಕೀಯ ಕೈದಿಯಾಗಿದ್ದಾರೆ ಎಂದು ಟ್ವೀಟ್ ಮೂಲಕ ತಿಳಿಸಿದ್ದರು.

ಈ ಮಧ್ಯೆ ಕ್ಯಾನ್ಸರ್ ನಿಂದ ಬಳಲುತ್ತಿರುವ ಅಲ್ತಾಫ್ ಅವರನ್ನು ದೆಹಲಿಯ ಏಮ್ಸ್’ಗೆ ಸ್ಥಳಾಂತರಿಸುವಂತೆ ದೆಹಲಿ ಹೈಕೋರ್ಟ್ ಅಕ್ಟೋಬರ್ 1 ರಂದು ಆದೇಶಿಸಿತ್ತು. ಅಲ್ಲದೆ ಕುಟುಂಬಸ್ಥರನ್ನು ಭೇಟಿಯಾಗಲು ಕೇವಲ 1 ಗಂಟೆ ಕಾಲಾವಕಾಶವನ್ನು ನೀಡಲು ನ್ಯಾಯಾಲಯ ಸೂಚಿಸಿತ್ತು. ನ್ಯಾಯಾಲಯದ ಆದೇಶದ ಹೊರತಾಗಿಯೂ ಸೂಕ್ತ ವೈದ್ಯಕೀಯ ಚಿಕಿತ್ಸೆ ಮತ್ತು ಆರೈಕೆಗೆ ಜೈಲು ಅಧಿಕಾರಿಗಳು ನಿರಾಕರಿಸಿದ್ದರು ಎಂದು ಅವರು ಪುತ್ರಿ ಆರೋಪಿಸಿದ್ದಾರೆ.

Join Whatsapp