ಡಿಎಂಕೆ ನಾಯಕ ಎ. ರಾಜಾ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

Prasthutha|

ಚೆನ್ನೈ: ಕೇಂದ್ರ ಸಚಿವರಾಗಿದ್ದಾಗ ಆದಾಯ ಮೀರಿದ ಸಂಪತ್ತು ಹೊಂದಿದ್ದರು ಎಂಬ ಆರೋಪದಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ಡಿಎಂಕೆ ನಾಯಕ ಎ.ರಾಜಾ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

- Advertisement -

ರಾಜಾ ಅವರ ಆದಾಯ 5.53 ಕೋಟಿ ರೂಪಾಯಿಗೆ ಏರಿಕೆಯಾಗಿದೆ ಎಂದು ಡಿಎಂಕೆ ನಾಯಕ ಎ. ರಾಜಾ ವಿರುದ್ಧ ಸಿಬಿಐ ಅಕ್ಟೋಬರ್ 11ರಂದು ಚಾರ್ಜ್ ಶೀಟ್ ಸಲ್ಲಿಸಿದೆ.

ಚೆನ್ನೈನ ವಿಶೇಷ ಸಿಬಿಐ ಕೋರ್ಟಿನಲ್ಲಿ ಈ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ರಾಜರ ಸಹಯೋಗಿ ಸಿ. ಕೃಷ್ಣಮೂರ್ತಿ ಎನ್ನುವವರಿಗೆ ಕಾಂಚೀಪುರದಲ್ಲಿ ಉದ್ಯಮ ಸ್ಥಾಪಿಸಲು ಜಮೀನು ಖರೀದಿಸಲು 2007ರ ಜನವರಿಯಲ್ಲಿ ರೂ. 4.56 ಕೋಟಿ ರೂಪಾಯಿ ಗುರುಗಾಂವ್ ನ ರಿಯಲ್ ಎಸ್ಟೇಟ್ ಸಂಸ್ಥೆಯೊಂದರಿಂದ ಸಲ್ಲಿಕೆಯಾಗಿದೆ ಎಂದು ಚಾರ್ಜ್ ಶೀಟ್ ನಲ್ಲಿ ಆಪಾದಿಸಲಾಗಿದೆ.

- Advertisement -

ಆದರೆ ಈ ಹಣವು ಕೇಂದ್ರದಲ್ಲಿ ಆಗ ಮಂತ್ರಿಯಾಗಿದ್ದ ಎ. ರಾಜಾರಿಗೆ ಸರಕಾರಿ ಸಂರಚನಾ ಭ್ರಷ್ಟಾಚಾರದಿಂದ ರಿಯಲ್ ಎಸ್ಟೇಟ್ ಉದ್ಯಮಿಗಳಿಂದ ಸಲ್ಲಿಕೆಯಾಗಿದೆ ಎಂದು ಆರೋಪಿಸಲಾಗಿದೆ.

ಸದರಿ ಕಂಪೆನಿಯು ಆಮೇಲೆ ಯಾವುದೇ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಕೊಂಡಿಲ್ಲ ಎಂದು ಸಿಬಿಐ ಇದೇ ಆಗಸ್ಟ್ ನಲ್ಲಿ ಆಪಾದಿಸಿತ್ತು. ಆಮೇಲೆ ಕಂಪೆನಿಯು ಕೊಯಮುತ್ತೂರಿನಲ್ಲಿ ಬೇಸಾಯದ ಭೂಮಿ ಕೊಂಡುದಾಗಿ ಹೇಳಲಾಗಿದೆ.

ರಾಜಾ ಅವರು ಸದರಿ ಕಂಪೆನಿಯಲ್ಲಿ ತನ್ನ ನಿರ್ದೇಶಕರನ್ನು ತುಂಬಿ ಆ ರೂ. 4.56 ಕೋಟಿಯ ಸಹಿತ ತೃಪ್ತಿಕರ ಆದಾಯ ಮೂಲ ತಿಳಿಸಲಾಗದ ರೂ. 5.53 ಕೋಟಿ ರೂಪಾಯಿ ಅಕ್ರಮ ಸಂಪತ್ತು ಗಳಿಸಿದ್ದಾರೆ ಎಂದು ಸಿಬಿಐ ಆಪಾದಿಸಿದೆ.

ರಾಜಾರರ ಮೂಲ ಆದಾಯಕ್ಕಿಂತ 579 ಶೇಕಡಾ ಹೆಚ್ಚುವರಿ ಆಕ್ರಮ ಆದಾಯ ಕೂಡಿದೆ ಎಂದು ಸಿಬಿಐ ಚಾರ್ಜ್ ಶೀಟಿನಲ್ಲಿ ಹೇಳಿದೆ.

Join Whatsapp