‘ಜೈ ಶ್ರೀರಾಮ್’ ಘೋಷಣೆ ಕೂಗುವಂತೆ ಒತ್ತಾಯ; ಮುಸ್ಲಿಂ ಯುವಕನಿಗೆ ಥಳಿಸಿದ ಹಿಂದುತ್ವವಾದಿಗಳು

Prasthutha|

ಭೋಪಾಲ್: ಮುಸ್ಲಿಂ ಯುವಕನನ್ನು ತಡೆದ ಹಿಂದುತ್ವವಾದಿಗಳು ‘ಜೈ ಶ್ರೀರಾಮ್’ ಘೋಷಣೆ ಕೂಗುವಂತೆ ಒತ್ತಾಯಿಸಿ ಕ್ರೂರವಾಗಿ ಥಳಿಸಿದ ಘಟನೆ ಮಧ್ಯಪ್ರದೇಶದ ಭೋಪಾಲ್ ನ ನಿಶಾತ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕರೋಂಡ್ ಗೇಟ್ ಬಳಿ ನಡೆದಿದೆ.

- Advertisement -

ಹಿಂದೂ ಕಾರ್ಯಕರ್ತರಿಬ್ಬರು  ಮುಸ್ಲಿಂ ಯುವಕನೊಬ್ಬನನ್ನು ತಡೆದು  ‘ಜೈ ಶ್ರೀರಾಮ್’ ಘೋಷಣೆ ಕೂಗುವಂತೆ ಒತ್ತಾಯಿಸುವ ವೀಡಿಯೋ  ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ.

ಪ್ರಾಣರಕ್ಷಣೆಗಾಗಿ  ‘ಜೈ ಶ್ರೀರಾಮ್’ ಎಂದು ಕೂಗಿದರೂ ಹಿಂದುತ್ವವಾದಿಗಳು ಕ್ರೂರವಾಗಿ ಥಳಿಸಿದ್ದಾರೆ. ಆತನ ತಲೆ ಮತ್ತು ಕಪಾಳಕ್ಕೆ ಬಲವಾಗಿ ಹೊಡೆದು  ಧರ್ಮ  ನಿಂದನೆ ಮಾಡಿ ಸಾರ್ವಜನಿಕವಾಗಿ ಅವಮಾನಿಸಲಾಗಿದೆ. ಘಟನೆಯ ವಿಡಿಯೋ ತುಣುಕನ್ನು ಸ್ವತಃ ಆರೋಪಿಗಳೇ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ವೀಡಿಯೋ ಮಾಡುತ್ತಿರುವವನು ಯುವಕನಿಗೆ ಹೊಡೆಯುವುದನ್ನು ನೋಡಿ ನಗುವುದನ್ನು ವೀಡಿಯೋದಲ್ಲಿ ಕೇಳಬಹುದಾಗಿದೆ.

- Advertisement -

 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಿಶಾತ್ ಪುರ ಪೊಲೀಸರು ತಿಳಿಸಿದ್ದಾರೆ.



Join Whatsapp