ಜಹಾಂಗೀರ್ ಪುರಿ ಹಿಂಸಾಚಾರ: ಪೊಲೀಸ್ ಪಾತ್ರದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಬೇಕು- ಬೃಂದಾ ಕಾರಟ್

Prasthutha|

ಹೊಸದಿಲ್ಲಿ: ಜಹಾಂಗೀರ್ ಪುರಿ ಹಿಂಸಾಚಾರ-ಪೊಲೀಸ್ ಪಾತ್ರದ ಬಗ್ಗೆ ಸ್ವತಂತ್ರ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಹೊಣೆಗಾರ ಪೊಲೀಸ್ ಸಿಬ್ಬಂದಿಯ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಸಿಪಿಐ(ಎಂ) ಪೊಲಿಟ್ ಬ್ಯುರೊ ಸದಸ್ಯೆ ಬೃಂದಾ ಕಾರಟ್ ದಿಲ್ಲಿ ಪೊಲೀಸ್ ಕಮಿಷನರ್ ಅಸ್ಥಾನಾ ಅವರಿಗೆ ಪತ್ರ ಬರೆದಿದ್ದಾರೆ.

- Advertisement -

ದಿಲ್ಲಿಯ ಜಹಾಂಗೀರ್ ಪುರಿಯಲ್ಲಿ ಸಂಭವಿಸಿದ ಕೋಮು ಹಿಂಸಾಚಾರದ ಘಟನೆಗಳನ್ನು ಸಂಪೂರ್ಣವಾಗಿ ತಪ್ಪಿಸಬಹುದಾಗಿತ್ತು ಎಂದು ಹಲವಾರು ಟಿವಿ ಚಾನೆಲ್ ಗಳಲ್ಲಿ ಪ್ರಸಾರವಾದ ವೀಡಿಯೊ ಚಿತ್ರಗಳಿಂದ ಮತ್ತು ಎಡಪಕ್ಷಗಳ ಸತ್ಯಶೋಧನಾ ತಂಡಕ್ಕೆ ಪ್ರತ್ಯಕ್ಷ  ಸಾಕ್ಷಿಗಳಿಂದ ಸಿಕ್ಕ ವರದಿಗಳಿಂದಲೂ ಎಂದು ಕಾಣುತ್ತದೆ. ಇವು ಇದರಲ್ಲಿ ಪೊಲೀಸರ ಪಾತ್ರಕ್ಕೆ ಸಂಬಂಧಿಸಿದಂತೆ ಹಲವು ಸಂದೇಹಗಳನ್ನು ಉಂಟುಮಾಡಿವೆ. ಈಗ ಇದರ ತನಿಖೆಯನ್ನು ಕ್ರೈಂ ಬ್ರಾಂಚ್ ಗೆ ಒಪ್ಪಿಸಲಾಗಿದೆ. ಅದರೆ ಇದೂ  ಜಹಾಂಗೀರ್ ಪುರಿ ಘಟನೆಯ ಪ್ರಕರಣದಲ್ಲಿ ಜವಾಬ್ದಾರರಾಗಿರುವ ಪೋಲಿಸ್ ಪಡೆಯ ಒಟ್ಟಾರೆ ಅಧಿಕಾರ ವ್ಯಾಪ್ತಿಗೇ ಒಳಪಟ್ಟಿರುವ ಸಂಸ್ಥೆ. ಆದ್ದರಿಂದ ಈ ಘಟನೆಗಳ ಬಗ್ಗೆ ಒಂದು  ನ್ಯಾಯಾಂಗ ತನಿಖೆ, ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.

ಮೆರವಣಿಗೆಯಲ್ಲಿ ಆಯುಧಗಳನ್ನು ಒಯ್ಯಲು  ಅವಕಾಶ ನೀಡಿರುವ, ಸಮರ್ಪಕ ವ್ಯವಸ್ಥೆಗಳ ಕೊರತೆಗೆ ಕಾರಣರಾದ, ಮೆರವಣಿಗೆಯನ್ನು ಮಸೀದಿಯ ಮುಂದೆ ನಿಲ್ಲಿಸಲು ಅನುಮತಿ ನೀಡಿದ ಮತ್ತು ಏಕಪಕ್ಷೀಯವಾಗಿ ಪಕ್ಷಪಾತಪೂರ್ಣ ತನಿಖೆ ನಡೆಸುತ್ತಿರುವ ಪೊಲೀಸ್ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

- Advertisement -

ಎರಡೂ ಸಮುದಾಯಗಳ ಜನರನ್ನು ಬಂಧಿಸಲಾಗಿದೆ ಎಂದು ಪೋಲೀಸ್ ಕಮಿಷನರ್ ಹೇಳಿದ್ದಾರೆ. ಆದರೆ ಘಟನೆಗಳು ನಡೆದಿರುವ ರೀತಿಯನ್ನು ನೋಡಿದರೆ ಇದರ ಮುಖ್ಯ ಪ್ರಚೋದನೆ ಮತ್ತು ಯೋಜನೆ ಮೆರವಣಿಗೆಯನ್ನು ನಡೆಸಿದ ಬಜರಂಗದಳದ ಅಂಗಸಂಘಟನೆಯದ್ದು ಎಂದು ಕಂಡುಬರುತ್ತಿದ್ದರೂ ಬಂಧಿತರಲ್ಲಿ ಬಹುಪಾಲು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರೇ ಆಗಿದ್ದಾರೆ ಎಂದು  ಹೇಳಿದ್ದಾರೆ.



Join Whatsapp