ಬೆಲ್ಲ: ಇದರ ಆರೋಗ್ಯ ಪ್ರಯೋಜನಗಳು ಒಂದೆರಡಲ್ಲ!

Prasthutha|

ಬೆಲ್ಲ ಬರೀ ಸಿಹಿ ಮಾತ್ರವಲ್ಲ. ಅದನ್ನು  ತಿಂದ್ರೆ ಸಿಗುವ ಆರೋಗ್ಯ ಪ್ರಯೋಜನಗಳು ಒಂದೆರಡಲ್ಲ,  ಬೆಟ್ಟದಷ್ಟು ಉಪಯೋಗಗಳಿವೆ . ಪ್ರತಿದಿನ ಬೆಳಗ್ಗೆ  ಬೆಲ್ಲ ತಿಂದ್ರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇಲ್ಲವೇ ಊಟದ ನಂತರ ಬೆಲ್ಲವನ್ನು ತಿನ್ನುವುದರಿಂದ ಹೊಟ್ಟೆಯೂ ತಂಪಾಗಿರುತ್ತದೆ. ರೋಗ ನಿರೋಧಕ  ಶಕ್ತಿಯೂ  ಹೆಚ್ಚಾಗಲು ಸಹಾಯ ಮಾಡುತ್ತೆ.  ಗ್ಯಾಸ್ ತೊಂದರೆಯೂ ಬರುವುದಿಲ್ಲ.

- Advertisement -

ಬೆಲ್ಲಾದಲ್ಲಿ ಸತು ಮತ್ತು ಸೆಲೆನಿಯಂ ಎಂಬ ಖನಿಜಾಂಶವಿರುತ್ತದೆ. ಇವು ದೇಹಸಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಯಾವುದೇ ಕಾಯಿಲೆ ಬರದಂತೆ ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಸಹಾಯ ಮಾಡುತ್ತೆ. ಅದಕ್ಕೆ ಯಾರಿಗಾದ್ರೂ ಸುಸ್ತಾದಾಗ ತಕ್ಷಣ ಬೆಲ್ಲ ನೀರು ಕೊಡುತ್ತಾರೆ.

ಲಿವರ್ ಸಮಸ್ಯೆ ಬರದಂತೆ ತಡೆಯುತ್ತದೆ

- Advertisement -

ಬಾಯಿಗೆ ರುಚಿ ಬರಲಿ ಎಂದು ನಾವು ಹೆಚ್ಚಾಗಿ ಕರಿದ ತಿಂಡಿಗಳು, ಪೌಷಿಕಾಂಶ ಇಲ್ಲದ ಆಹಾರಳನ್ನು ಸೇವಿಸಿ ಬಿಡುತ್ತೇವೆ. ಕೆಲವೊಮ್ಮೆ ಎಲ್ಲವನ್ನು ದಕ್ಕಿಸಿಕೊಳ್ಳಲು ಲಿವರ್‍ಗೆ ಆಗಲ್ಲ. ಹಲವು ಬಾರಿ ಲಿವರ್ ನಲ್ಲಿ ಅನೇಕ ವಿಷಕಾರಿ ಅಂಶಗಳು ಶೇಖರಣೆಯಾಗುತ್ತಿರುತ್ತವೆ. ಆದ್ದರಿಂದ ಪ್ರತಿದಿನ ಸ್ಪಲ್ಪ ಬೆಲ್ಲ ಸೇವಿಸಿದ್ರೆ, ವಿಷಕಾರಿ ಅಂಶಗಳು ನಾಶವಾಗಲು ಸಹಾಯ ಮಾಡುತ್ತೆ.

ಜೀರ್ಣಕ್ರಿಯೆಗೆ ಸಹಾಯ ಮಾಡುತ್ತೆ

ಬೆಲ್ಲ ತಿನ್ನುವುದರಿಂದ ಜೀರ್ಣಕೃಯೆಗೇ ಸಹಾಯ ಮಾಡುತ್ತೆ. ಜೀರ್ಣಕ್ರಿಯೆಗೆ ಸಹಾಯ ಮಾಡುವ ಕಿಣ್ವಗಳನ್ನು ಬೆಲ್ಲದಲ್ಲಿರುವ ಅಂಶ ಸಕ್ರಿಯಗೊಳಿಸುದೆ. ಊಟದ ನಂತರ ಬೆಲ್ಲ ತಿಂದ್ರೆ ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ. ಮಲಬದ್ಧತೆಯ ಸಮಸ್ಯೆಯೂ ಕಾಡುವುದಿಲ್ಲ.

ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಾಗಲು ಸಹಾಯ

ಮಹಿಳೆಯರಿಗೆ ಹೆಚ್ಚಾಗಿ ಹಿಮೋಗ್ಲೋಬಿನ್ ಸಮಸ್ಯೆ ಕಾಡುತ್ತಿರುತ್ತೆ. ದಿನ ಬೆಲ್ಲ ತಿಂದ್ರೆ ಹಿಮೋಗ್ಲೋಬಿನ್ ಮಟ್ಟದಲ್ಲಿ ಏರಿಕೆಯಾಗುತ್ತದೆ ಎಂದು ಆರ್ಯುವೇದದ ವೈದ್ಯರು ಹೇಳಿದ್ದಾರೆ. ಐರನ್ ಕಂಟೆಂಟ್ ಹೆಚ್ಚಿರುವುದರಿಂದ ಕೆಂಪು ರಕ್ತ ಕಣಗಳು ಹೆಚ್ಚಾಗುತ್ತವೆ.

ಸಕ್ಕರೆ ಕಾಯಿಲೆ ಇರುವವರಿಗೆ ಒಳ್ಳೆಯದು

ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ಸಿಗಿ ತಿನ್ನಬೇಕು ಅನ್ನಿಸುತ್ತದೆ. ಸಕ್ಕರೆ ತಿಂದ್ರೆ ಡೇಂಜರ್ ಬದಲಿಗೆ ಬೆಲ್ಲವಿರುವ ಆಹಾರ ಪದಾರ್ಥ ತಿಂದರೆ ಅವರ ಆಸೆಯೂ ತೀರುತ್ತದೆ. ಆರೋಗ್ಯಕ್ಕೂ ಒಳ್ಳೆಯದು.



Join Whatsapp