ಚಿತ್ರದುರ್ಗ: ಟಿವಿ ರಿಮೋಟ್ ವಿಚಾರಕ್ಕೆ ಮಕ್ಕಳಿಬ್ಬರ ನಡುವೆ ಗಲಾಟೆ: ಮಗನನ್ನು ಕೊಂದ ತಂದೆ!

Prasthutha|

ಚಿತ್ರದುರ್ಗ: ಟಿವಿ ರಿಮೋಟ್ ವಿಚಾರಕ್ಕೆ ಇಬ್ಬರು ಮಕ್ಕಳ ಮಧ್ಯೆ ನಡೆದ ಜಗಳ ನಡೆದಿದ್ದು, ತಂದೆಯ ಸಿಟ್ಟಿಗೆ ಓರ್ವ ಮಗ ಮೃತಪಟ್ಟಿರುವ ಘಟನೆ ಮೊಳಕಾಲ್ಮೂರು ಎನ್ ಎಂ ಎಸ್ ಬಡಾವಣೆಯಲ್ಲಿ ವರದಿಯಾಗಿದೆ.

- Advertisement -

ಚಂದ್ರಶೇಖರ್ (16) ಮೃತಪಟ್ಟಿರುವ ಬಾಲಕ. ಟಿ.ವಿ ರಿಮೋಟ್ ವಿಚಾರಕ್ಕಾಗಿ ಇಬ್ಬರು ಮಕ್ಕಳು ಜಗಳ ಆಡುತ್ತಿದ್ದಾಗ  ಪಾರ್ಶ್ವವಾಯು ಪೀಡಿತನಾಗಿದ್ದ  ತಂದೆ ಲಕ್ಷ್ಮಣ ಬಾಬು ರ ಸಿಟ್ಟಿಗೆದ್ದು ಕುಳಿತಲ್ಲಿಂದಲೇ ಬೀಸಿ ಎಸೆದ ಕತ್ತರಿಯಿಂದ ಚಂದ್ರಶೇಖರ ಮೃತಪಟ್ಟಿದ್ದಾನೆ.

ಕತ್ತರಿ ಚಂದ್ರಶೇಖರನ ಕುತ್ತಿಗೆಯ ಬಲಭಾಗಕ್ಕೆ ಬಿದ್ದ ಕಾರಣ ತೀವ್ರ ರಕ್ತ ಸ್ರಾವವಾಗಿದೆ. ತಕ್ಷಣ ಚಂದ್ರಶೇಖರನ ತಾಯಿ ಗಾಯಾಳು ಪುತ್ರನನ್ನು ಪಟ್ಟಣದಲ್ಲಿರುವ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ‌. ಆದರೆ ಮಾರ್ಗ ಮಧ್ಯೆ ರಾಂಪುರ ಸಮೀಪ ಪುತ್ರ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.

- Advertisement -

ಸ್ಥಳಕ್ಕೆ ಪಿಎಸ್ಐ ಪಾಂಡುರಂಗ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,  ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.