ಜಗದೀಶ್ ಶೆಟ್ಟರ್ ರಾಜೀನಾಮೆ ನೋವು ತಂದಿದೆ: ಸಿಎಂ ಬೊಮ್ಮಾಯಿ

Prasthutha|

ಹುಬ್ಬಳ್ಳಿ : ಜಗದೀಶ್ ಶೆಟ್ಟರ್ ಅವರು ರಾಜೀನಾಮೆ ನೀಡಿರುವುದು ನೋವು ಹಾಗೂ ಕಸಿವಿಸಿ ಉಂಟು ಮಾಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಈ ಭಾಗದ ಹಿರಿಯ ಹಾಗೂ ಪ್ರಮುಖ ನಾಯಕರು. ಪಕ್ಷವು ಹಲವಾರು ಸಂದರ್ಭದಲ್ಲಿ ಅನೇಕ ನಿರ್ಣಯ ಮಾಡಿದೆ.

- Advertisement -

ನಾನು ಅವರ ವಿರುದ್ಧ ಸ್ಪರ್ಧೆ ಮಾಡಿದ್ದೆ. ಮೋದಿ ನೇತೃತ್ವದಲ್ಲಿ ಸ್ಥಾಪಿತ ರಾಜಕಾರಣದಲ್ಲಿ ಬದಲಾವಣೆ ತರುವ ಪ್ರಯತ್ನ ಮಾಡಲಾಗುತ್ತಿದೆ. ಕೆ.ಎಸ್. ಈಶ್ವರಪ್ಪ ಅವರು ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ. ಶೆಟ್ಟರ್ ಅವರಿಗೆ ದೆಹಲಿ ಮಟ್ಟದಲ್ಲಿ ಇದಕ್ಕಿಂತ ದೊಡ್ಡ ಹುದ್ದೆ ಕೊಡಲಾಗುವುದು ಎಂದು ಜೆ.ಪಿ.ನಡ್ಡಾ, ಅಮಿತ್ ಶಾ ಅವರು ತಿಳಿಸಿದ್ದರು.

ಪಕ್ಷದಲ್ಲಿ ಇರಬೇಕಿತ್ತು‌:

- Advertisement -

ನಿನ್ನೆಯೂ ಚರ್ಚೆ ಮಾಡಿ, ಅವರು ಹೇಳಿರೋರಿಗೆ ಟಿಕೆಟ್ ಕೊಡಲಾಗುವುದು ಎಂದು ತಿಳಿಸಲಾಯಿತು. ಜಗದೀಶ್ ಶೆಟ್ಟರ್ ಅವರು ಮುಂದುವರಿಸಿಕೊಂಡು ಹೋಗಿದ್ದರೆ ಉತ್ತಮವಾಗಿತ್ತು ಎಂದರು.



Join Whatsapp