ಬಿಲ್ಲವರಿಗೆ ಅವಮಾನ | ಕ್ಷಮೆ ಯಾಚಿಸಿದ ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ

Prasthutha|

ಮೂಡುಬಿದಿರೆ : ಬಿಲ್ಲವರು ಮತ್ತು ಅವರ ಆರಾಧ್ಯ ದೈವ ಕೋಟಿ ಚೆನ್ನಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದಕ್ಕೆ ಬಿಜೆಪಿ ಜಿಲ್ಲಾ ಮುಖಂಡ ಜಗದೀಶ್ ಅಧಿಕಾರಿ ಕ್ಷಮೆ ಯಾಚಿಸಿದ್ದಾರೆ. ಈ ಸಂಬಂಧ ಅವರು ಮೂಡುಬಿದಿರೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, ವಿಷಾಧ ವ್ಯಕ್ತಪಡಿಸಿದ್ದಾರೆ.

- Advertisement -

ನಾನು ಜನಾರ್ಧನ ಪೂಜಾರಿ ಅವರ ಅಭಿಮಾನಿ. ಖಂಡಿತವಾಗಿ ಅವರಿಗೆ ನೋವು ಮಾಡುವ ಉದ್ದೇಶದಿಂದ ನಾನು ಮಾತನಾಡಿದ್ದಲ್ಲ. ಜನಾರ್ಧನ ಪೂಜಾರಿಯವರು ಮಹಾನ್ ವ್ಯಕ್ತಿ, ದೇಶದ ಮಹಾನ್ ವ್ಯಕ್ತಿ. ಜಿಲ್ಲೆಗೆ ಗೌರವ ತಂದುಕೊಟ್ಟವರು, ಪ್ರಾಮಾಣಿಕತೆಗೆ ಹೆಸರುವಾಸಿಯಾದವರು. ಅವರ ವಿಚಾರದಲ್ಲಿ ಖಂಡಿತವಾಗಿಯೂ ಗೌರವವಿದೆ. ಬಿಜೆಪಿಯಲ್ಲಿದ್ದರೂ ನಾನು ಪೂಜಾರಿಯವರ ಅಭಿಮಾನಿ. ಜೀವಿತದ ವರೆಗೂ ಅಭಿಮಾನಿಯಾಗಿರುತ್ತೇನೆ ಎಂದು ಅಧಿಕಾರಿ ಹೇಳಿದ್ದಾರೆ.

ನಾನು ಬಿಲ್ಲವ ಸಮಾಜಕ್ಕೆ ಯಾವುದೇ ರೀತಿಯ ಅಗೌರವ ತೋರಿಸಿಲ್ಲ. ಆದರೂ ಬಿಲ್ಲವ ಸಮಾಜ ಬಾಂಧವರಿಗೆ ನನ್ನಿಂದಾಗಿ ಮನಸ್ಸಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಅವರು ಹೇಳಿದ್ದಾರೆ.

- Advertisement -

ಬಿಲ್ಲವರ ಬಗ್ಗೆ ಅವಮಾನಕಾರಿಯಾಗಿ ಮಾತನಾಡಿದ್ದಾರೆನ್ನಲಾದ ವೀಡಿಯೊ ಮತ್ತು ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಹಿನ್ನೆಲೆಯಲ್ಲಿ, ದೊಡ್ಡ ಮಟ್ಟದ ವಿವಾದ ಸೃಷ್ಟಿಯಾದ ಬೆನ್ನಲ್ಲೇ ಅಧಿಕಾರಿ ಪತ್ರಿಕಾಗೋಷ್ಠಿ ಮಾಡಿ, ಸ್ಪಷ್ಟನೆ ನೀಡಿದ್ದಾರೆ.

Join Whatsapp