ವಿದೇಶಕ್ಕೆ ತೆರಳಲು ಪಾಸ್ ಪೋರ್ಟ್ ಕೇಳಿದ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ !

Prasthutha|

ಮುಂಬೈ: ಇಡಿ ವಿಚಾರಣೆಯನ್ನು ಎದುರಿಸುತ್ತಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫೆರ್ನಾಂಡಿಸ್, ನನಗೆ ವಿದೇಶಕ್ಕೆ ತೆರಳಲು ಪಾಸ್ ಪೋರ್ಟ್ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ. ನೂರಾರು ಕೋಟಿ ವಂಚನೆಗೈದಿರುವ ಉದ್ಯಮಿ ಸುಕೇಶ್ ಚಂದ್ರಶೇಖರ್ ಜೊತೆ ನಿಕಟ ಸಂಪರ್ಕ ಹೊಂದಿದ್ದ ನಟಿ ಜಾಕ್ವೆಲಿನ್ ಅವರನ್ನು ಕಳೆದ ಕೆಲವು ತಿಂಗಳ ಹಿಂದೆ ಇಡಿ ವಿಚಾರಣೆ ನಡೆಸಿತ್ತು. ಬಳಿಕ ಅಧಿಕಾರಿಗಳು ನಟಿಗೆ ಸೇರಿದ್ದ 7.27 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದ್ದರು.

- Advertisement -


ಇದೀಗ ವಿದೇಶಕ್ಕೆ ತೆರಳಲು ಅನುಮತಿ ಕೋರಿ ಜಾಕ್ವೆಲಿನ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ದುಬೈನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿ ಕಾರ್ಯಕ್ರಮಕ್ಕೆ ಜಾಕ್ವೆಲಿನ್’ಗೆ ಆಮಂತ್ರಣವಿದ್ದು, ಈ ಕಾರ್ಯಕ್ರಮಕ್ಕೆ ತೆರಳಲು ನನಗೆ ಪಾಸ್ ಪೋರ್ಟ್ ನೀಡಿ ಎಂದು ನಟಿ ಮನವಿ ಸಲ್ಲಿಸಿದ್ದಾರೆ.


ಪ್ರಶಸ್ತಿ ಕಾರ್ಯಕ್ರಮಕ್ಕೆ 15 ದಿನ ದುಬೈಗೆ ತೆರಳಲು ನನಗೆ ಅವಕಾಶ ನೀಡಬೇಕು, ಅದರೊಂದಿಗೆ ಫ್ರಾನ್ಸ್ ಹಾಗೂ ನೇಪಾಳಕ್ಕೆ ತೆರಳಲೂ ಅನುಮತಿ ನೀಡುವಂತೆ ಮನವಿಯಲ್ಲಿ ಕೇಳಿಕೊಂಡಿದ್ದಾರೆ. ಈ ಮೊದಲು ವಿದೇಶಕ್ಕೆ ಹೊರಟಿದ್ದ ನಟಿಯನ್ನು ವಿಮಾನ ನಿಲ್ದಾಣದಲ್ಲೇ ತಡೆಯಲಾಗಿತ್ತು. ಇದೀಗ ಜಾಕ್ವೆಲಿನ್ ಕೋರ್ಟ್ ಮೊರೆ ಹೋಗಿದ್ದಾರೆ.

Join Whatsapp