ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಉಳಿಸಲು ಇದು ಸಕಾಲ: ಬಿಬಿಸಿ ಸಾಕ್ಷ್ಯಚಿತ್ರದ ಬಗ್ಗೆ ಯುಎಸ್’ಎ ಹೇಳಿಕೆ

Prasthutha|

►ಬಿಬಿಸಿ ಸಾಕ್ಷ್ಯಚಿತ್ರ ನಿಷೇಧ ಖಂಡಿಸಿದ ಅಮೆರಿಕ

- Advertisement -


ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಬಿಬಿಸಿ ತಯಾರಿಸಿರುವ ಸಾಕ್ಷ್ಯಚಿತ್ರ ನಿಷೇಧವನ್ನು ಖಂಡಿಸಿರುವ ಯುಎಸ್ ವಿದೇಶಾಂಗ ಸಚಿವಾಲಯವು ಇದು ಮುಕ್ತ ಮಾಧ್ಯಮದ ಪ್ರಶ್ನೆಯಾಗಿದೆ. ಭಾರತ ಸಹಿತ ಜಗತ್ತಿನೆಲ್ಲೆಡೆ ಈಗ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮತ್ತು ಅಭಿಪ್ರಾಯ ಸ್ವಾತಂತ್ರ್ಯವನ್ನು ತಿಳಿಹೇಳಬೇಕಾದ ಕಾಲ ಬಂದಿದೆ ಎಂದೂ ವಿದೇಶಾಂಗ ಸಚಿವಾಲಯ ಹೇಳಿದೆ.


ವಾಷಿಂಗ್ಟನ್ ಸದಾ ಮುಕ್ತ ಮಾಧ್ಯಮವನ್ನು ಬೆಂಬಲಿಸಿದೆ. ಅದೇ ವೇಳೆ ಅಭಿಪ್ರಾಯ ಸ್ವಾತಂತ್ರ್ಯಕ್ಕೆ ಆದ್ಯತೆ ನೀಡಿದೆ ಎಂದು ಅಮೆರಿಕದ ವಿದೇಶಾಂಗ ಸಚಿವಾಲಯದ ವಕ್ತಾರರಾದ ನೆಡ್ ಪ್ರೆಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ನಾವು ಜಗತ್ತಿನಾದ್ಯಂತ ಮುಕ್ತ ಮಾಧ್ಯಮವನ್ನು ಬೆಂಬಲಿಸುತ್ತೇವೆ. ಅಭಿಪ್ರಾಯ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ, ಮಾನವ ಹಕ್ಕುಗಳು ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸುವುದಾಗಿದ್ದು, ಅದನ್ನೇ ನಾವು ಒತ್ತಿ ಹೇಳುತ್ತೇವೆ. ನಾವು ಒಳ್ಳೆಯ ಸಂಬಂಧ ಹೊಂದಿರುವ ಎಲ್ಲ ದೇಶಗಳಿಗೂ ಇದನ್ನು ಒತ್ತಿ ಹೇಳುತ್ತೇವೆ; ಮೇಡ್ ಇನ್ ಇಂಡಿಯಾಕ್ಕೂ ಕೂಡ ” ಎಂದು ನೆಡ್ ಅವರು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.
ಭಾರತದೊಂದಿಗೆ ಯುಎಸ್’ಎ ರಾಜಕೀಯ, ಆರ್ಥಿಕ ಮತ್ತು ಜನರಿಂದ ಜನರಿಗೆ ಆಳವಾದ ಸಂಬಂಧವನ್ನು ಹೊಂದಿದ್ದು ಈ ಜಾಗತಿಕ ಸಂಬಂಧದ ಸುಸ್ಥಿರತೆ ಹಾಳು ಮಾಡಲು ಕೆಲವು ವಿಷಯಗಳು ಅಡ್ಡ ಬರುತ್ತಿರುತ್ತವೆ ಎಂದು ಅವರು ತಿಳಿಸಿದರು.

- Advertisement -


“ನೀವು ಹೇಳುವ ಸಾಕ್ಷ್ಯಚಿತ್ರವನ್ನು ನಾನು ನೋಡಿಲ್ಲ. ಆದರೆ ಜಗತ್ತಿನ ಎರಡು ಬೃಹತ್ ಪ್ರಜಾಪ್ರಭುತ್ವ ದೇಶಗಳಾದ ಯುಎಸ್’ಎ ಮತ್ತು ಭಾರತದ ಮೌಲ್ಯಗಳ ಬಗ್ಗೆ ನಾನು ಸ್ಪಷ್ಟವಾಗಿದ್ದೇನೆ. ಯಾವಾಗಲೆಲ್ಲ ನಾವು ಧ್ವನಿ ಎತ್ತಬೇಕಾಗಿ ಬರುತ್ತದೋ ಆವಾಗಲೆಲ್ಲ ನಾವು ಧ್ವನಿಯೆತ್ತಿದ್ದೇವೆ” ಅವರು ಹೇಳಿದರು.


ಕಳೆದ ವಾರ ಬ್ರಿಟನ್ ಪ್ರಧಾನಿ ರಿಷಿ ಸುನಕ್ ರವರು ಪ್ರಧಾನಿ ಮೋದಿಯವರನ್ನು ಬೆಂಬಲಿಸಿ ಬಿಬಿಸಿ ಸಾಕ್ಷ್ಯಚಿತ್ರಗಳಿಂದ ಅಂತರ ಕಾಯ್ದುಕೊಂಡಿದ್ದರು.
ಪಾಕಿಸ್ತಾನ ಮೂಲದ ಬ್ರಿಟನ್ ಸಂಸದ ಇಮ್ರಾನ್ ಹುಸೇನ್ ಅವರು ಈ ಸಾಕ್ಷ್ಯಚಿತ್ರಗಳ ಪ್ರಸ್ತಾಪವನ್ನು ಸಂಸತ್ತಿನಲ್ಲಿ ಮಾಡಿದಾಗ, ಸುನಕ್ ಅವರು ಮೋದಿ ಪರ ನಿಂತಿದ್ದರು.
ಮೋದಿಯವರು ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ಜನಾಂಗೀಯ ಹತ್ಯೆಗೆ ಕಾರಣರಾಗಿದ್ದರು, ಕಾನೂನು ಸುವ್ಯವಸ್ಥೆ ಮುರಿದಿದ್ದರು ಎಂದು ಎರಡು ಭಾಗಗಳ ಸಾಕ್ಷ್ಯಚಿತ್ರವನ್ನು ಬಿಬಿಸಿ ತಯಾರಿಸಿದೆ. ಭಾರತ ಸರಕಾರವು ಕೆಲವು ಜಾಲ ತಾಣ ವೇದಿಕೆಗಳಲ್ಲಿ ಆ ಸಾಕ್ಷ್ಯ ಚಿತ್ರವನ್ನು ನಿಷೇಧಿಸಿದೆ.
ಭಾರತದ ವಿದೇಶಾಂಗ ಸಚಿವಾಲಯವು ಆ ಸಾಕ್ಷ್ಯಚಿತ್ರವು ಸುಳ್ಳಿನ ಕಂತೆ ಎಂದು ಹೇಳಿತ್ತು.



Join Whatsapp