ಉಳ್ಳಾಲ SDPI ಕಚೇರಿಯಲ್ಲಿ 74ನೇ ಗಣರಾಜ್ಯೋತ್ಸವ: ಗಣರಾಜ್ಯ ರಕ್ಷಣೆಗೆ ಕರೆ

Prasthutha|

ಉಳ್ಳಾಲ: ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ SDPI ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ದೇಶದ 74ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಉಳ್ಳಾಲ SDPI ಕಚೇರಿ ಬಳಿ ಆಚರಿಸಲಾಯಿತು.

- Advertisement -


ಕಾರ್ಯಕ್ರಮದ ಅಧ್ಯಕ್ಷತೆಯನ್ನು SDPI ಉಳ್ಳಾಲ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಇರ್ಶಾದ್ ಅಜ್ಜಿನಡ್ಕ ವಹಿಸಿದ್ದರು.


ಈ ಕಾರ್ಯಕ್ರಮದ ಮುಖ್ಯ ಅತಿಥಿ SDPI ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಇವರು ಗಣರಾಜ್ಯೋತ್ಸವದ ಧ್ವಜಾರೋಹಣೆಯನ್ನು ನಡೆಸಿ, ಮುಖ್ಯ ಭಾಷಣ ಮಾಡಿ, ಇಂದು ನಮ್ಮನ್ನಾಳುವ ಸರಕಾರಗಳ ಹಾಗೂ ವಿರೋಧ ಪಕ್ಷಗಳು ಸಂವಿಧಾನದ ಮಹತ್ವವನ್ನು ತಳ್ಳಿ ಹಾಕಿ ಪ್ರಜೆಗಳನ್ನು ಪ್ರಜೆಗಳ ಹಕ್ಕುಗಳನ್ನೇ ಕಸಿಯುತ್ತಿದೆ, ಆದುದರಿಂದ ಸಂವಿಧಾನವನ್ನು ರಕ್ಷಣೆ ಮಾಡುವುದು ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿಯಾಗಿದೆ ಎಂದು ಒತ್ತಿ ಹೇಳಿದರು.

- Advertisement -


ಕಾರ್ಯಕ್ರಮದಲ್ಲಿ ಇನ್ನೋರ್ವ ಅತಿಥಿ SDPI ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ SDPI ರಾಜ್ಯ ಮುಖಂಡರಾದ ನವಾಝ್ ಉಳ್ಳಾಲ, SDPI ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷೆ ಮಿಶ್ರಿಯಾ ಕಣ್ಣೂರು, ಮಿಲ್ಲತ್ ನಗರ ಜುಮಾ ಮಸ್ಜಿದ್ ಅಧ್ಯಕ್ಷರಾದ ಖಲೀಲ್, ಮುಸ್ಲಿಂ ಒಕ್ಕೂಟ ಉಳ್ಳಾಲ ಅಧ್ಯಕ್ಷರಾದ ಇಸ್ಮಾಯಿಲ್ ಉಳ್ಳಾಲ, SDPI ಉಳ್ಳಾಲ ನಗರ ಸಭಾ ಸಮಿತಿ ಅಧ್ಯಕ್ಷರಾದ ಎ ಆರ್ ಅಬ್ಬಾಸ್ ಉಪಾಧ್ಯಕ್ಷರಾದ ಇಮ್ತಿಯಾಜ್ ಉಳ್ಳಾಲ ಹಾಗೂ ನಗರ ಸಭಾ ಕೌನ್ಸಿಲರ್’ಗಳು ಸ್ಥಳೀಯ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.

Join Whatsapp