ಜೀವಂತ ಇದ್ದವರನ್ನೇ ತರೋದು ಕಷ್ಟ, ಉಕ್ರೇನ್ ನಿಂದ ನವೀನ್ ಶವ ತರುವುದು ಇನ್ನೂ ಕಷ್ಟ: ಬೆಲ್ಲದ್

Prasthutha|

ಧಾರವಾಡ: ರಷ್ಯಾದ ಶೆಲ್ ದಾಳಿಗೆ ಒಳಗಾಗಿ ಉಕ್ರೇನ್ ನಲ್ಲಿ ಮರಣ ಹೊಂದಿದ ಕನ್ನಡಿಗ ನವೀನ್ ಅವರ ಮೃತದೇಹವನ್ನು ಭಾರತಕ್ಕೆ ತರಲು ಕಷ್ಟವಿದೆ. ಜೀವಂತವಾಗಿರುವವರನ್ನೇ ಭಾರತಕ್ಕೆ ವಾಪಸ್ ಕರೆತರುವುದು ಕಷ್ಟವಿದೆ. ಹೀಗಿರುವಾಗ ನವೀನ್ ಮೃತದೇಹ ತರುವುದು ಇನ್ನೂ ಕಷ್ಟವಿದೆ ಎಂದು ಶಾಸಕ ಅರವಿಂದ ಬೆಲ್ಲದ್ ಹೇಳಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಮಾನದಲ್ಲಿ ಶವ ತರಲು ಹೆಚ್ಚು ಜಾಗಬೇಕು.ಭಾರತ ಸರ್ಕಾರದ ವಿದೇಶಾಂಗ ಇಲಾಖೆ ನವೀನ್ ಶವ ತರಲು ಪ್ರಯತ್ನ ಮಾಡುತ್ತಿದೆ. ಸ್ವತಃ ಪ್ರಧಾನಿ ಮೋದಿ ಅವರೇ ಮುತುವರ್ಜಿ ವಹಿಸಿದ್ದಾರೆ. ಮಾಧ್ಯಮದವರೇ ಅದನ್ನ ತೊರಿಸುತ್ತಿದ್ದಾರೆ. ಸಾಧ್ಯವಾದರೆ ಮೃತದೇಹ ತರುವ ಕೆಲಸ ಆಗಲಿದೆ ಎಂದು ಹೇಳಿದರು.

ಅಲ್ಲಿ ಇದ್ದವರು ಒತ್ತಡದಲ್ಲಿ ಇದ್ದಾರೆ. ರೊಮೇನಿಯಾಗೆ ಬಂದಿದ್ದಾರೆ ಅಂದರೆ ಸೇಫ್ ಆಗಿದ್ದಾರೆ ಎಂದರ್ಥ. ಅವರನ್ನು ತರುವ ಕೆಲಸ ಬೇಗ ಆಗಲಿದೆ. ನಮ್ಮ ವಿದ್ಯಾರ್ಥಿಗಳು ಇಷ್ಟು ದೊಡ್ಡ ಪ್ರಮಾಣದಲ್ಲಿ ಅಲ್ಲಿ ಯಾಕೆ ಎಂಬಿಬಿಎಸ್ ಗೆ ಹೋಗುತ್ತಿದ್ದಾರೆ. ಅದಕ್ಕೆ ಕಾರಣ ನಮ್ಮಲ್ಲಿ ವೈದ್ಯಕೀಯ ಕಲಿಯುವುದು ದೊಡ್ಡ ಖರ್ಚು ಎಂದು ಅಸಮಾಧಾನ ಹೊರಹಾಕಿದರು.

Join Whatsapp