ಟಿ20 ವಿಶ್ವಕಪ್‌ | ʻಕ್ಷಮಿಸಿ ಬ್ರದರ್‌… ಇದನ್ನು ಕರ್ಮ ಎಂದು ಕರೆಯುತ್ತಾರೆʼ ; ಅಖ್ತರ್‌ಗೆ ಟ್ವಿಟರ್‌ನಲ್ಲಿ ಶಮಿ ಪ್ರತ್ಯುತ್ತರ

Prasthutha|

ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ ಟೂರ್ನಿಯ  ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನ ಇಂಗ್ಲೆಂಡ್‌ ತಂಡಕ್ಕೆ 5 ವಿಕೆಟ್‌ ಅಂತರದಲ್ಲಿ ಶರಣಾಗಿದೆ. ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ನೀರಸ ಪ್ರದರ್ಶನ ನೀಡಿದ್ದ ಪಾಕ್‌, 2ನೇ ಬಾರಿಗೆ ವಿಶ್ವ ಚಾಂಪಿಯನ್‌ ಆಗುವ ಕನಸು ಭಗ್ನವಾಗಿದೆ.

- Advertisement -

ಆಂಗ್ಲರ ವಿರುದ್ಧ ಮುಗ್ಗರಿಸುತ್ತಲೇ ಟ್ವೀಟ್‌ ಮಾಡಿದ್ದ, ಪಾಕಿಸ್ತಾನದ ಮಾಜಿ ದಿಗ್ಗಜ ಬೌಲರ್‌ ಶೊಯೆಬ್‌ ಅಖ್ತರ್‌ ʻಒಡೆದ ಹೃದಯದ ಇಮೋಜಿʼ ಪೋಸ್ಟ್‌ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಭಾರತದ ಹಿರಿಯ ವೇಗಿ ಮುಹಮ್ಮದ್‌ ಶಮಿ,  ʻಕ್ಷಮಿಸಿ ಬ್ರದರ್‌… ಇದನ್ನು ಕರ್ಮ ಎಂದು ಕರೆಯುತ್ತಾರೆʼ ಎಂದು ತಿವಿದಿದ್ದಾರೆ. ಶಮಿ ಟ್ವೀಟ್‌ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಫೈನಲ್‌ನಲ್ಲಿ ಗೆದ್ದ ಜಾಸ್‌ ಬಟ್ಲರ್‌ ಬಳಗವನ್ನು ಅಬಿನಂಧಿಸಿ ಟ್ವೀಟ್‌ ಮಾಡಿರುವ ಶಮಿ, ಇಂಗ್ಲೆಂಡ್‌ ಅರ್ಹ ಗೆಲುವು ಸಾಧಿಸಿದೆ ಎಂದಿದ್ದಾರೆ. 

- Advertisement -

ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಭಾರತ ಹೀನಾಯ ಸೋಲು ಕಂಡಿತ್ತು. ಇದರ ಬೆನ್ನಲ್ಲೇ ಟೀಮ್‌ ಇಂಡಿಯಾದ ಆಟದ ವೈಖರಿ ಮತ್ತು ತಂಡದ ಆಯ್ಕೆ ಕುರಿತು ಅಖ್ತರ್‌ ಟೀಕೆ ಮಾಡಿದ್ದರು. ಇದಕ್ಕೂ ಮೊದಲು ಹಲವು ಬಾರಿ ಟೀಮ್‌ ಇಂಡಿಯಾ ವಿರುದ್ಧ ಅಖ್ತರ್‌, ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಮಾಡುವುದನ್ನು ಮುಂದುವರಿಸಿದ್ದರು. ಟೀಮ್‌ ಇಂಡಿಯಾ ಟಿ20 ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸುವುದಿಲ್ಲ ಎಂದು ಅಖ್ತರ್‌ ಹೇಳಿದ್ದರು

ಹೀಗಾಗಿ ಶಮಿ ಟ್ವೀಟ್‌ ಮಾಡುತ್ತಲೇ, ಭಾರತೀಯ ಕ್ರಿಕೆಟ್‌ ಅಭಿಮಾನಿಗಳು ಅಖ್ತರ್‌ರನ್ನು ಟ್ರೋಲ್‌ ಮಾಡಲು ಆರಂಭಿಸಿದ್ದಾರೆ. 



Join Whatsapp