ಯುರೋ ಕಪ್ ಫುಟ್ಬಾಲ್ | ಪ್ರಶಸ್ತಿ ಮುಡಿಗೇರಿಸಿಕೊಂಡ ಇಟಲಿ

Prasthutha: July 12, 2021

ಲಂಡನ್ : ಇಂಗ್ಲೆಂಡ್ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 3-2 ಗೋಲುಗಳಿಂದ ಸೋಲಿಸಿದ ಬಲಿಷ್ಠ ಇಟಲಿ ತಂಡ ಯೂರೋ ಕಪ್ ಫುಟ್ಬಾಲ್ ಟೂರ್ನಿಯ ಚಾಂಪಿಯನ್ ಪಟ್ಟ ಅಲಂಕರಿಸಿದೆ. ವಿಶ್ವ ಫುಟ್‌ಬಾಲ್‌ನ ಪವರ್‌ ಹೌಸ್‌ ಎಂದು ಗುರುತಿಸಿಕೊಂಡಿರುವ ಯುರೋಕಪ್ ಚಾಂಪಿಯನ್‌ಶಿಪ್‌ಗೆ ನಿನ್ನೆ ಮಧ್ಯರಾತ್ರಿ ತೆರೆಬಿದ್ದಿದೆ. ಅಂತಿಮ ಹಣಾಹಣಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಇಂಗ್ಲೆಂಡ್‌ ತಂಡವನ್ನು ಮಣಿಸಿ ಇಟಲಿ ಬರೊಬ್ಬರಿ 53 ವರ್ಷಗಳ ನಂತರ ಚಾಂಪಿಯನ್‌ಶಿಪ್ ಪಟ್ಟ ತನ್ನದಾಗಿಸಿಕೊಂಡಿತು.

ವಿಶ್ವ ಫುಟ್ಬಾಲ್‌ನ ಪವರ್‌ ಹೌಸ್‌ ಎಂದು ಕರೆಸಿಕೊಳ್ಲುವ ಫ್ರಾನ್ಸ್‌, ಜರ್ಮನಿ, ಸ್ಪೇನ್‌, ಬೆಲ್ಜಿಯಮ್‌ ತಂಡಗಳು ಫೈನಲ್‌ ಪ್ರವೇಶಿಸಲು ವಿಫಲವಾಗಿದ್ದವು. ಈ ಸಂದರ್ಭದಲ್ಲಿ ಇಟಲಿ ಯುರೋ ಕಪ್‌ ಗೆಲ್ಲುವುದರೊಂದಿಗೆ ಮುಂದಿನ ವರ್ಷ 2022 ರ ಫುಟ್ಬಾಲ್‌ ವಿಶ್ವಕಪ್‌ಗೆ ಸಿದ್ಧವಾಗಿರುವ ಸಂದೇಶವನ್ನು ನೀಡಿದೆ.

ಇಂಗ್ಲೆಂಡ್‌ ರಾಜಧಾನಿ ಲಂಡನ್‌ ನಗರದ ವೆಂಬ್ಲೆ ಕ್ರೀಡಾಂಗಣದಲ್ಲಿ ತವರಿನ ಪ್ರೇಕ್ಷಕರೆದರು ಮೊಟ್ಟ ಮೊದಲ ಬಾರಿಗೆ ಯುರೋಪಿಯನ್‌ ಚಾಂಪಿಯನ್‌ ಆಗುವ ಇಂಗ್ಲೆಂಡ್‌ ಕನಸು ನಿನ್ನೆ ತಡರಾತ್ರಿ ಭಗ್ನಗೊಂಡಿತು. ಲ್ಯೂಕ್ ಶಾ ಪಂದ್ಯದ 2 ನೇ ನಿಮಿಷದಲ್ಲಿ ಸಿಡಿಸಿದ ಆರಂಭಿಕ ಗೋಲಿನ ಮುನ್ನಡೆಯ ಹೊರತಾಗಿಯೂ ಇಂಗ್ಲೆಂಡ್‌ ಆಟಗಾರರಿಗೆ ಪಂದ್ಯದಲ್ಲಿ ಮತ್ತೊಂದು ಗೋಲು ಗಳಿಸಲು ಸಾಧ್ಯವಾಗಲಿಲ್ಲ.
ಅತ್ತ 4 ಬಾರಿಯ ವಿಶ್ವಕಪ್‌ ಚಾಂಪಿಯನ್‌ ಇಟಲಿ ಕೂಡ 2006 ರ ವಿಶ್ವಕಪ್‌ ಗೆಲುವಿನ ನಂತರ ಸತತ 15 ವರ್ಷ ಗೆಲುವಿನ ರುಚಿ ಸವಿದಿರಲಿಲ್ಲ. 2012 ರಲ್ಲಿ ಬಲಿಷ್ಠ ಸ್ಪೇನ್‌ ತಂಡದ ವಿರುದ್ಧ ಸೋಲನುಭವಿಸುವ ಮೂಲಕ ನಿರಾಸೆ ಗೊಂಡಿದ್ದ ಇಟಲಿ ಯುರೋ ಕಪ್‌ 2020 ಚಾಂಪಿಯನ್‌ಶಿಪ್ ಮುಡಿಗೇರಿಸಿಕೊಳ್ಳುವ ಮೂಲಕ 2012 ರ ನಿರಾಸೆಗೆ ಕೊನೆಹಾಡಿತು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ