ಫ್ರಾನ್ಸ್ ಗೆ ಪ್ರಶಸ್ತಿ ಹಿಂದಿರುಗಿಸಿದ ಇಟಲಿ ಬುದ್ಧಿಜೀವಿಗಳು

Prasthutha|

ಹಲವು ಮಾನವ ಹಕ್ಕು ಉಲ್ಲಂಘನೆಯ ದಾಖಲೆಯನ್ನು ಹೊಂದಿರುವ ಹೊರತಾಗಿಯೂ ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತಹ್ ಅಲ್ ಸಿಸಿಗೆ ಅತ್ಯುನ್ನತ ಗೌರವ ಪ್ರಶಸ್ತಿ ನೀಡಿರುವುದನ್ನು ಖಂಡಿಸಿ ಇಟಲಿಯ ಇಬ್ಬರು ಬುದ್ಧಿಜೀವಿಗಳು ತಮ್ಮ ಪ್ರಶಸ್ತಿಗಳನ್ನು ಫ್ರಾನ್ಸ್ ಸರಕಾರಕ್ಕೆ ಹಿಂದಿರುಗಿಸಿದ್ದಾರೆ.

- Advertisement -

ಪತ್ರಕರ್ತ ಮತ್ತು ಯುರೋಪ್ ಸಂಸತ್ತಿನ ಮಾಜಿ ಸದಸ್ಯ ಕೊರಾಡೊ ಆಗಿಯಸ್ 2007ರಲ್ಲಿ ತನಗೆ ನೀಡಲಾದ ಪ್ರಶಸ್ತಿಯನ್ನು ಸೋಮವಾರದಂದು ಫ್ರಾನ್ಸ್ ರಾಯಭಾರಿ ಕಚೇರಿಗೆ ಹಿಂದಿರುಗಿಸಿದ್ದಾರೆ.

ಇಟಲಿಯ ಸಂಸ್ಕೃತಿ ಸಚಿವ ಮತ್ತು ರೋಮ್ ನ ಮ್ಯಾಕ್ಸಿ ಸಮಕಾಲೀನ ಕಲಾ ವಸ್ತುಪ್ರದರ್ಶನಾಲಯದ ಅಧ್ಯಕ್ಷ ಜಿಯೊವೆನ್ನಾ ಮೆಲಂಡ್ರಿ ಕೂಡ ತಾನು ಪ್ರಶಸ್ತಿಯನ್ನು ಹಿಂದಿರುಗಿಸುವುದಾಗಿ ಪ್ರಕಟಿಸಿದ್ದಾರೆ.

- Advertisement -

ಕೈರೊದಲ್ಲಿ 2016ರಲ್ಲಿ ಇಟಲಿ ವಿದ್ಯಾರ್ಥಿಯೋರ್ವನನ್ನು ಹತ್ಯೆಗೈಯ್ಯುವುದರ ಹಿಂದೆ ಈಜಿಪ್ಟ್ ಪಾತ್ರ ಮತ್ತು ಸಿಸಿ ಆಡಳಿತದ ಇತರ ಮಾನವ ಹಕ್ಕುಗಳ ಉಲ್ಲಂಘನೆಯ ಕಾರಣಗಳಿಂದ ತಾವು ಈ ಕ್ರಮವನ್ನು ತೆಗೆದುಕೊಂಡಿರುವುದಾಗಿ ಅವರು ಹೇಳಿದ್ದಾರೆ.

ಸಿಸಿ ಕಳೆದ ವಾರ ಫ್ರಾನ್ಸ್ ಭೇಟಿ ಮಾಡಿದ್ದರು. ಈ ವೇಳೆ ಅಧ್ಯಕ್ಷ ಇಮ್ಯಾನುಯಲ್ ಮ್ಯಾಕ್ರನ್ ಫ್ರಾನ್ಸ್ ನ ಅತ್ಯುನ್ನತ ಗೌರವ ಪ್ರಶಸ್ತಿಯನ್ನು ನೀಡಿ ಅಭಿನಂದಿಸಿದ್ದರು.



Join Whatsapp